ತಾಳಿಕೋಟೆ:ಜೂ.24: ಪಟ್ಟಣದ ಆರಾಧ್ಯ ದೇವತೆ ಶ್ರೀ ಗ್ರಾಮದೇವತೆ(ದ್ಯಾಮವ್ವ)ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ದ್ಯಾಮವ್ವದೇವಿಯ ಮಹಾ ಮೂರ್ತಿಯನ್ನು ರಥದಲ್ಲಿ ಕೂಡ್ರಿಸಿದ ನಂತರ ಭವ್ಯ ಮೆರವಣಿಗೆಗೆ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಚಾಲನೆ ನೀಡಿದರು.
ಬೆಳಿಗ್ಗೆ 8-30 ಗಂಟೆಗೆ ಪಟ್ಟಣದ ಶ್ರೀ ಅಂಬಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಶ್ರೀದೇವಿಯ ಮೆರವಣಿಗೆಯು ಕತ್ರಿಬಜಾರ, ಪಿಕೆಪಿಎಸ್ ಬ್ಯಾಂಕ್ ರಸ್ತೆ, ಪಂಚಸೈಯದ ದರ್ಗಾದ ಮುಂದಿನ ರಸ್ತೆಯ ಮೂಲಕ ರಾಜವಾಡೆಯಲ್ಲಿ ನಿರ್ಮಿಸಲಾಗಿರುವ ಪಾದಗಟ್ಟೆಗೆ ಸಾಯಂಕಾಲ 7 ಗಂಟೆಗೆ ಬಂದು ತಲುಪಿತು. ನಂತರ ಶ್ರೀದೇವಿಯನ್ನು ಪಾದಗಟ್ಟೆಯಲ್ಲಿ ಕೂಡ್ರಿಸಿ ವಿವಿಧ ಪೂಜಾ ವಿದಾನಗಳನ್ನು ಸಲ್ಲಿಸಲಾಯಿತ್ತಲ್ಲದೇ ಭಕ್ತರು ತಮ್ಮ ಬೇಕು ಬೇಡಿಕೆಗಳ ಇಡೇರಿಕೆಗಾಗಿ ದೀಡ ನಮಸ್ಕಾರಗಳನ್ನು ಹಾಕಿದರು. ನಂತರ ಭಕ್ತರು ಶ್ರೀದೇವಿಗೆ ಉಡಿ ತುಂಬಿ ತಮ್ಮ ಭಕ್ತಭಾವವನ್ನು ಮೇರೆದರು.
ಮೆರಗು ತಂದ ಕಲಾ ತಂಡಗಳುಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರಾ ಉತ್ಸವದ ಭವ್ಯ ಮೆರವಣಿಗೆಯುದ್ದಕ್ಕೂ ರಾಜವಾಡೆಯ ಶ್ರೀದೇವಿ ಕೋಲಾಟ ಸಂಘದಿಂದ ವಿವಿಧ ಗೀತೆಗಳಿಗೆ ತಕ್ಕಂತೆ ಹೆಜ್ಜೆಹಾಕುವದರೊಂದಿಗೆ ಕೋಲಾಟ ನೃತ್ಯಮಾಡಿದರು. ಡೋಳ್ಳಿನ ವಾದ್ಯದ ಕುಣಿತ, ಹೆಣ್ಣು ಮಕ್ಕಳ ಡೋಳ್ಳಿನ ಮೇಳ, ಬಂಟ್ವಾಳದ ಚಿಲಿಪಿಲಿ ಗೊಂಬೆ ಬಳಗದಿಂದ ಗೊಂಬೆ ಕುಣಿತ, ಕರಡಿ ಮಜಲು, ಸೈಬ್ರಕಟ್ಟಿಯ ಶನೇಶ್ವರ ಸಿಂಗಾರಿ ಚಂಡಿ ಮೇಳ, ಸಂಬಳ ಮೇಳ, ಚೌಡ್ಕಿ, ಶ್ರೀ ಜೈ ಹನುಮಾನ ಸಂಬಾಳ, ಕರಡಿ ಮತ್ತು ಶಹನಾಯಿ ಮಜಲು ಒಳಗೊಂಡಂತೆ ಅನೇಕ ನೃತ್ಯತಂಡಗಳು ಭಾಗವಹಿಸಿ ಮೇರವಣಿಗೆಗೆ ಶೋಭೆ ತಂದುಕೊಟ್ಟವು.
ದಿ.23 ಶುಕ್ರವಾರರಂದು ಪ್ರಾರಂಭಗೊಂಡಿರುವ ಶ್ರೀ ಗ್ರಾಮದೇವತೆಯ ಜಾತ್ರೋತ್ಸವವು ದಿ.27 ರಂದು ಮಂಗಲಗೊಳ್ಳಲಿದ್ದು 5 ದಿನಗಳ ಕಾಲ ಗೀಗಿಪದ ಒಳಗೊಂಡು ಬೈಲಾಟ, ದೇಶಿಯ ಆಟಗಳು ಒಳಗೊಂಡು ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ.
ಪಟಾಕ್ಷೀ ಸಂಭ್ರಮಶ್ರೀ ಗ್ರಾಮದೇವತೆಯ ಜಾತ್ರೋತ್ಸವ ಅಂಗವಾಗಿ ಶ್ರೀ ದೇವಿಯ ಮಹಾ ಮೂರ್ತಿಯ ಮೆರವಣಿಗೆಯ ಸಮಯದಲ್ಲಿ ವಿವಿಧ ನಮೂನೆಯ ಪಟಾಕ್ಷೀಗಳನ್ನು ಸಿಡಿಸಿ ಭಕ್ತಾದಿಗಳು ಸಂಭ್ರಮಿಸಿದರು.
ಜಾತ್ರೋತ್ಸವಕ್ಕೆ ಮಹಿಳೆಯರ ದಂಡು
ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್ರೀ ಗ್ರಾಮದೇವತೆ ಹಾಗೂ ಪ್ರತಿವರ್ಷ ಜರುಗುವ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವವು ಒಟ್ಟಿಗೆ ಕೂಡಿಬಂದಿರುವದರಿಂದ ಮೇರವಣಿಗೆಯಲ್ಲಿ ಪುರುಷರಕ್ಕಿಂತಲೂ ಮಹಿಳೆಯರೇ ಹೆಚ್ಚಿಗೆ ಪಾಲ್ಗೊಂಡಿದ್ದು ಕಂಡುಬಂದಿತು.
ಜಾತ್ರೋತ್ಸವ ಅಂಗವಾಗಿ ನಡೆದ ಮೇರವಣಿಗೆಯಲ್ಲಿ ಯಾವುದೇ ತರಹದ ಅಹೀತಕರ ಘಟನೆ ಜರುಗದಂತೆ ಸಿಪಿಐ ಮಲ್ಲಿಕಾರ್ಜುನ ತುಳಸಗೇರಿ, ಪಿಎಸ್‍ಐ ರಾಮನಗೌಡ ಸಂಕನಾಳ, ಅಪರಾದವಿಭಾಗದ ಪಿಎಸ್‍ಐ ಆರ್.ಎಸ್.ಭಂಗಿ ಅವರು ಡಿಆರ್ ತುಕಡಿ ಅಲ್ಲದೇ ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳೊಂದಿಗೆ ಯೋಗ್ಯ ಬಂದೋಬಸ್ತ ಕೈಗೊಂಡಿದ್ದರು.