ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನದಿಂದ ಪರಿಸರ ದಿನಾಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೬; ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ (ರಿ) ಹೊದಿಗೆರೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನೆರೆವೇರಿಸಲಾಯಿತು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾದ ವೇ.ಶ್ರೀ ಬಸವಣಯ್ಯ ಶಾಸ್ತ್ರಿಗಳು ಮಾತನಾಡಿಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ವಿಶ್ವದಾದ್ಯಂತ ಸುಮಾರು 143 ದೇಶಗಳು ಆಚರಿಸುತ್ತವೆ. ಪರಿಸರದ ಕಾಳಜಿ ಜೊತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಇದನ್ನು ವಿಶ್ವಸಂಸ್ಥೆಯು ಸ್ಥಾಪಿಸಿತು. 1974 ರಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್ ನೊಂದಿಗೆ ಆಚರಿಸುತ್ತಾ ಬಂದಿದೆ. ವಿಶ್ವ ಪರಿಸರ ದಿನಾಚರಣೆಯ ಜಾಗತಿಕ ಆಚರಣೆಯನ್ನು ನಿಯಂತ್ರಿಸುವ ಮುಖ್ಯ ಸಂಸ್ಥೆ ವಿಶ್ವಸಂಸ್ಥೆ.ಆಗಿದೆಯಂದು ಹೇಳಿದರು ಹಾಗೂ ಅಧ್ಯಕ್ಷರಾದ ವಿದ್ವಾನ್ ಶ್ರೀ ಬುದೀಸ್ವಾಮಿ ಹಿರೇಮಠ ಮಾತನಾಡಿ ಋಷಿಗಳ ಕಾಲದಲ್ಲಿಯೂ ಸಹ ವೇದಗಳಲ್ಲಿ ಪರಿಸರ ಪಂಚಭೂತಗಳ ರಕ್ಷಣೆಗೆ ಬಹಳ ಮಹತ್ವವನ್ನು ಕೊಟ್ಟಿದ್ದಾರೆ.ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಳವರೆಗೂ ಹೀಗೆಯೂ ಉಳಿಯಬೇಕಿದೆ ಎಂದರು.ಬೇಸರವೆಂದರೆ ನಾವು ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪದಿಂದಾಗಿ ಈ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸುವ ಯೋಚನೆಯೊಂದಿಗೆ ಬಂದಿತು.ಎಂದು ಹೇಳಿದರು ಈ ಸಂದರ್ಭದಲ್ಲಿ ನಾಗೇಂದ್ರಯ್ಯ ನವರು ಸಂಗಯ್ಯನವರು ವೇ ಶ್ರೀ ಶಿವಲಿಂಗಯ್ಯ ಶಾಸ್ತ್ರಿಗಳು ಮಾವಿನಹೊಳೆ. ಮೋಹನ್ ಶಾಸ್ತ್ರಿಗಳು. ಪ್ರಮೋದ್ ಶಾಖೆಗಳು.ಭಾಗವಹಿಸಿದ್ದರು.