ಶ್ರೀ ದುರ್ಗಂಬಿಕಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ರಕ್ತದಾನ ಶಿಬಿರ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೨೩; ನಗರದೇವತೆ ಶ್ರೀ ದುರ್ಗಂಬಿಕಾ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ  ಶ್ರೀ ದುರ್ಗಂಬಿಕಾ ದೇವಿ ಟ್ರಸ್ಟ್, ದಾವಣಗೆರೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ ಇವರುಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆಯ ಸಭಾಪತಿಗಳಾದ ಡಾ. ಎ ಎಂ ಶಿವಕುಮಾರ್ ನೇತೃತ್ವದಲ್ಲಿ, ಗೌರವ ಸಭಾಪತಿಗಳಾದ ಗೌಡರ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಜ್ಯೋತಿ, ನಿರ್ದೇಶಕರಾದ ಕರಿಬಸಪ್ಪ ಟಿ, ರವಿಕುಮಾರ್ ಎ ಜೆ, ವೈದ್ಯಾಧಿಕಾರಿಗಳಾದ ಡಾ. ಪಿ ಕೆ ಬಸವರಾಜ್, ಸಂಚಾಲಕರು ಮತ್ತು ಆಪ್ತಸಮಾಲೋಚಕರಾದ ಶಿವಕುಮಾರ ಎನ್ ಜಿ, ಪ್ರಯೋಗಶಾಲಾ ಮೇಲ್ವಿಚಾರಕರಾದ ವಿನಾಯಕ ಆರ್, ಪ್ರಯೋಗಶಾಲಾ ತಂತ್ರಜ್ಞರಾದ ಗಿರೀಶ್, ಕೊಟ್ರೇಶ್ ಇತರರು ಹಾಜರಿದ್ದರು.ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಶನಿವಾರ ಮತ್ತು ಭಾನುವಾರವು ಆಯೋಜಿಸಲಾಗಿದ್ದು ರಕ್ತದಾನಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡಲಾಗಿದೆ.