ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಬಿಳ್ಕೋಡುಗೆ

ಕಲಬುಗಿ;ಫೆ.11: ನಗರದ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಏರ್ಪಡಿಸಿದ 10ನೇ ತರಗತಿಯ ಬಿಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಈ ಸಮಾರಂಭಕ್ಕೆ ಕೆಂದ್ರಿಯ ವಿಶ್ವವಿದ್ಯಾಲಯ ಕಡಗಂಚಿಯ ಪೆÇ್ರೀ; ಆರ್ ಆರ್ ಬಿರಾದಾರ ಅವರು ಚಾಲನೆ ನೀಡಿ, ಮಾತನಾಡಿ ವಿದ್ಯಾರ್ಥಿಗಳಿಗೆ ಆತ್ಮವಿಸ್ವಾಸ ಮತ್ತು ಕಠಿಣ ಪರಿಶ್ರಮದಮೂಲಕ ಗುರಿಯನ್ನು ತಲುಪಲು ಸಾಧ್ಯ ಮತ್ತು ವಿದ್ಯಾರ್ಥಿಳಿಗೆ ಪರೀಕ್ಷೆಯ ಬಗ್ಗೆ ಧ್ಯರ್ಯ ತುಂಬಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷ ರಾಮಚಂದ್ರ ಡಿ ರಘೋಜಿ, ಸಂಸ್ಥೆಯ ಕಾರ್ಯದರ್ಶಿ, ಮೀರಾ ಆರ್ ರಘೋಜಿ, ಸಂಸ್ಥೆಯ ಸಂಚಾಲಕಿ ಕುಮಾರಿ ನಂದಿನಿ ಆರ್ ರಘೋಜಿ, ಶಾಲೆಯ ಪ್ರಾಂಶುಪಾಲ ಪ್ರಮೋದ ಎಸ್ ಮಳೇಕರ, ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಿಣ್ಣಿ ಸೇರಿದಂತೆ ಶಾಲೆಯ ಬೊಧಕರು, ಬೋಧಕೇತರರು ಹಾಗೂ ಮಕ್ಕಳು ಉಪಸ್ಥಿತರಿದ್ದರು.