ಶ್ರೀ ದಾನಮ್ಮದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಕಳಸಾರೋಹಣ


ಮುನವಳ್ಳಿ,ಜ.22: ಪಟ್ಟಣದ ಶ್ರೀ ದಾನಮ್ಮದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಹಾಗೂ ಕಳಸಾರೋಹಣ ಅಂಗವಾಗಿ ಜ.22 ರಿಂದ ಜ.26 ರವರೆಗೆ ಪ್ರತಿದಿನ ಸಂಜೆ 6.30 ರಿಂದ 8.30 ರವರೆಗೆ ನಾಗನೂರಿನ ಗುರುಬಸವ ಮಠದ ಬಸವಗೀತಾ ಮಾತಾಜಿ ಅವರಿಂದ ಆಧ್ಯಾತ್ಮಿಕ ಪ್ರವಚನ ದೇವಸ್ಥಾನದ ಆವರಣದಲ್ಲಿ ಜರಗುವದು.
ಜ.22 ರಂದು ಸಂಜೆ 6.30ಕ್ಕೆ ಆಧ್ಯಾತ್ಮಿಕ ಪ್ರವಚನ ಪ್ರಾರಂಭೋತ್ಸವ, ಜ.23 ರಂದು ಬೆಳಗ್ಗೆ 9 ಗಂಟೆಗೆ ನೂತನ ಕಳಸವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಿಂದ ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯ ಮೇಳಗಳೋಂದಿಗೆ ಭವ್ಯ ಮೆರವಣಿಗೆ ಮೂಲಕ ದೇವಸ್ಥಾನ ತಲುಪುವದು. ಜ.26 ರಂದು ಬೆಳಗ್ಗೆ 9 ಗಂಟೆಗೆ ದಾನಮ್ಮದೇವಿ ದೇವಸ್ಥಾನದ ಗೋಪುರ ಉದ್ಘಾಟನೆ, ಕಳಸಾರೋಹಣ ಹಾಗೂ ಪ್ರವಚನ ಮಂಗಲ ಜರುಗುವದು. ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ದರಾಜಯೋಗೀಂದ್ರ ಶ್ರೀಗಳು, ತೋರಗಲ್ಲದ ಚನ್ನಮಲ್ಲ ಶಿವಾಚಾರ್ಯ ಶ್ರೀಗಳು, ಪಟ್ಟಣದ ಸೋಮಶೇಖರಮಠದ ಶ್ರೀ ಮುರುಘೇಂದ್ರ ಶ್ರೀಗಳು ವಹಿಸುವರು. ಪ್ರತಿದಿನ ಪ್ರವಚನ ಮುಗಿದ ಮೇಲೆ ಮಹಾಪ್ರಸಾದ ಇರುತ್ತದೆ ಎಂದು ದಾನಮ್ಮದೇವಿ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿರುವರು.