ಶ್ರೀ ದತ್ತಾತ್ರೇಯನಿಗೆ ಶ್ರದ್ಧಾ ಭಕ್ತಿಯ ಕ್ಷೀರಾಭಿಷೇಕ


ನರೇಗಲ್ಲ,ಫೆ.25: : ಭಾರತದಲ್ಲಿ ಗೋವುಗಳನ್ನು ದೇವತೆಯೆಂದು ಪೂಜಿಸುತ್ತಾರೆ. ಆಕಳಿನ ಹೊಟ್ಟೆಯಲ್ಲಿ ಉತ್ಪಾದನೆಯಾಗುವ ಕ್ಷೀರವು ಅಮೃತಕ್ಕೆ ಸಮಾನವಾಗಿದೆ. ಎಲ್ಲರಿಗೂ ಇದು ಅತ್ಯಂತ ಪ್ರಿಯವಾಗಿದ್ದು, ಭಗವಂತನಿಗೂ ಸಹ ಆಕಳಿನ ಕ್ಷೀರ ಅತ್ಯಂತ ಪ್ರಿಯವಾಗಿದೆ ಎಂದು ದತ್ತ ದೇವಸ್ಥಾನದ ಅರ್ಚಕ ಶ್ರೀವಲ್ಲಭಶಾಸ್ತ್ರಿ ಸದರಜೋಷಿ ಹೇಳಿದರು.
ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ 114ನೇ ಗುರುಪ್ರತಿಪದೆ ಉತ್ಸವದ ನಿಮಿತ್ತ ಶನಿವಾರ ಶ್ರೀ ಗುರು ದತ್ತಾತ್ರೇಯನಿಗೆ ಕ್ಷೀರಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಶಿವನು ಅಭಿಷೇಕ ಪ್ರಿಯ. ದತ್ತಾತ್ರೇಯನಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವತರಿಸಿದ್ದಾರೆ. ಕ್ಷೀರಾಭಿಷೇಕದಿಂದ ಭಗವಂತ ಸಂಪ್ರೀತನಾಗುತ್ತಾನೆ ಎಂದರು.
ಈ ಸಂದರ್ಭದಲ್ಲಿ 11ಜನ ಋತ್ವಿಜರು ರುದ್ರಪಠಣ ಮಾಡುತ್ತ ಶ್ರೀ ದತ್ತ ಮಹಾರಾಜರಿಗೆ ಕ್ಷೀರಾಭಿಷೇಕದ ಸೇವೆಯನ್ನು ಅತ್ಯಂತ ಭಕ್ತಿ-ಭಾವದಿಂದ ನೇರವೇರಿಸಿದರು.
ವೇ.ಮೂ. ವಿಶ್ವನಾಥಭಟ್ಟ ವೈದ್ಯ, ಎಸ್.ಎಚ್ ಕುಲಕರ್ಣಿ, ಎ.ಜಿ ಕುಲಕರ್ಣಿ, ಅರುಣ ಕುಲಕರ್ಣಿ, ರಾಮಚಂದ್ರ ಕುಲಕರ್ಣಿ, ಡಾ. ಕೃಷ್ಣಾ ಕಾಳೆ, ಆದರ್ಶ ಕುಲಕರ್ಣಿ, ಅಜೀತ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಹರೀಶ ಕುಲಕರ್ಣಿ, ಆನಂದ ಕುಲಕರ್ಣಿ, ವಸಂತ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ನಾಗರಾಜ ನಾಡಗೇರ, ವಿ.ಆರ್ ಗ್ರಾಮಪುರೋಹಿತ, ಶ್ರೀಧರ ಗ್ರಾಮಪುರೋಹಿತ, ಆನಂದ ಕಾಳೆ, ಬಾಬುರಾವ ಕಾಳೆ, ಮುಕುಂದ ಸೂರ್ಯಭಟ್, ರಾಮಕೃಷ್ಣ ಸದರಜೋಶಿ, ಪ್ರಕಾಶ ಕಾಳೆ, ಸೇರಿದಂತೆ ಇತರರಿದ್ದರು.