
ಹುಬ್ಬಳ್ಳಿ, ಫೆ24: ಶ್ರೀ ಸಹಸ್ರಾರ್ಜುನ ಮಂಗಲ ಕಾರ್ಯ ಸಮಿತಿ,ಹುಬ್ಬಳ್ಳಿ ವತಿಯಿಂದ ದಿನಾಂಕ: 24 ರಂದು, ನಗರದ ನೆಹರು ಮೈದಾನದಲ್ಲಿ ನಡೆಯಲಿರುವ ಎಸ್. ಎಸ್.ಕೆ. ಸಮಾಜ ಬಾಂಧವರ ಸಾಮೂಹಿಕ ಉಪನಯನ ವ ವಿವಾಹ ಸಮಾರಂಭದ ನಿಮಿತ್ಯ, ದಿನಾಂಕ: 23 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಬೆಳಿಗ್ಗೆ ಶ್ರೀದೇವಿ ತುಳಜಾಭವಾನಿ ಮಾತೆಗೆ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು, ಗೊಂದಳ ಪೂಜೆ,ವಟುಗಳಿಗೆ ಮತ್ತು ವಧು- ವರರಿಗೆ ಆರಿಷಿಣ ಲೇಪನ ಹಾಗೂ ಕಂಕಣ ಕಟ್ಟುವುದು, ವಧು ವರರಿಗೆ ಗುರುತಿನ ಚೀಟಿ ಹಾಗೂ ಬಟ್ಟೆ ವಿತರಣೆ, ಶ್ರೀ ಗಾಯತ್ರಿ ಹೋಮ ಮುಂತಾದ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನಡೆದವು.
ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಸಹಸ್ರಾರ್ಜುನ ಮಂಗಲ ಕಾರ್ಯ ಸಮಿತಿಯ ಪದಾಧಿಕಾರಿಗಳು ವಹಿಸಿದ್ದು, ಅಧ್ಯಕ್ಷರಾದ ಭಾಸ್ಕರ ಎನ್. ಜಿತೂರಿ, ಉಪಾಧ್ಯಕ್ಷರಾದ ವಿ. ಟಿ. ಬದ್ದಿ, ಗೌರವ ಕಾರ್ಯದರ್ಶಿ ಶ್ರೀನಾಥ್ ಆರ್ ಪವಾರ, ಕೋಶಾಧಿಕಾರಿ ಲಕ್ಷ್ಮಣ ದಲಬಂಜನ, ಸಹ ಕಾರ್ಯದರ್ಶಿ ಜಿ.ವಿ. ಜಿತೂರಿ, ಸದಸ್ಯರಾದ ಎಫ್. ಕೆ.ದಲಬಂಜನ, ಜಿ.ಎನ್. ಹಬೀಬ, ಬಿ. ಹೆಚ್. ಇರ್ಕಲ್, ಎನ್. ಆರ್.ಕಾಟಿಗರ, ವಿ. ಎ.ರತನ, ಪುರೋಹಿತ ವರ್ಗದವರು ಹಾಗೂ ಮಹಿಳಾ ಮುಖಂಡರುಗಳು ವಹಿಸಿದ್ದರು.
ಎಸ್. ಎಸ್. ಕೆ.ಸಮಾಜದ, ಚೀಫ್ ಟ್ರಸ್ಟಿಗಳಾದ ಸತೀಶ ಜಿ ಮೆಹರವಾಡೆ ಈ ಸಂದರ್ಭದಲ್ಲಿ ವಧು ವರರಿಗೆ ಮತ್ತು ವಟುಗಳಿಗೆ ಶುಭ ಹಾರೈಸಿದರು.
ಕೇಂದ್ರ ಪಂಚ ಸಮಿತಿಯ ಉಪಮುಖ್ಯ ಧರ್ಮದರ್ಶಿಗಳಾದ ಕೆ.ಪಿ. ಪೂಜಾರಿ,ಗೌರವ ಕಾರ್ಯದರ್ಶಿಗಳಾದ ಎನ್. ಎನ್. ಖೋಡೆ,ಸಹ ಕಾರ್ಯದರ್ಶಿ ಟಿ.ವಿ.ಪೂಜಾರಿ, ಎಸ್. ಎಸ್. ಕೆ. ಸಮಾಜದ ಮಾಜಿ ಮುಖ್ಯ ಧರ್ಮದರ್ಶಿ ನೀಲಕಂಠ ಪಿ. ಜಡಿ, ಮಾಜಿ ಮಹಾಪೌರರಾದ ಡಿ.ಕೆ. ಚೌಹಾಣ, ಸುರೇಶ ಸ್ವಾಮಿಸಾ ಮೇಹರವಾಡೆ, ಶ್ರೀಮತಿ ಸರಳಾ ಭಾಂಡಗೆ , ಶ್ರೀಮತಿ ಶೋಭಾ ಇರ್ಕಲ್, ಶ್ರೀಮತಿ ಭಾಗ್ಯಶ್ರೀ ಬಿ. ಜಿತೂರಿ, ಕುಮಾರಿ ರಾಜಶ್ರೀ ಜಡಿ , ಶ್ರೀಮತಿ ಶೋಭಾ ಹಬೀಬ, ಶ್ರೀಮತಿ ನಿರ್ಮಲಾ ಎಸ್. ಪವಾರ ಸೇರಿದಂತೆ, ಉಪನಯನದಲ್ಲಿ ಭಾಗವಹಿಸಲಿರುವ 149 ವಟುಗಳು ಐದು ಜೋಡಿ ವಧು-ವರರು ಹಾಗು ನೂರಾರು ಮಹಿಳಾ ಪ್ರಮುಖರು,ಪಂಚ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಮಾರು 3000ಕ್ಕೂ ಹೆಚ್ಚು ಸಮಾಜ ಬಾಂಧವರು ಮಹಾಪ್ರಸಾದ ಸ್ವೀಕರಿಸಿದರು.