ಶ್ರೀ ತರಳಬಾಳು ಸಹಕಾರ ಸಂಘದ ನೂತನ ಅಧ್ಯಕ್ಷರು- ಉಪಾಧ್ಯಕ್ಷರ ಆಯ್ಕೆ 

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೨೫;:  ಶ್ರೀ ತರಳಬಾಳು ಸಹಕಾರ ಸಂಘದ ಪ್ರಥಮ ಸಭೆಯು ಎಂಸಿಸಿ ಬಿ ಬ್ಲಾಕ್ ನ 2 ನೇ ಮುಖ್ಯ ರಸ್ತೆಯಲ್ಲಿರುವ ಎ. ಕೆ. ಫೌಂಡೇಶನ್ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸಿ. ಅನಿಲ್ ಕುಮಾರ ನಾಯ್ಕ್ ಅವರು ಹಾಗೂ ಉಪಾಧ್ಯಕ್ಷರಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಸಿದ್ದಪ್ಪ ಅವರು ಆಯ್ಕೆಯಾದರು.ಸಭೆಯಲ್ಲಿ ಷೇರು ಸಂಗ್ರಹಣೆ ಸೇರಿದಂತೆ ಇತರೆ ವಿಚಾರ ಕುರಿತಂತೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಶ್ರೀ ತರಳಬಾಳು ಸಹಕಾರ ಸಂಘ ನಿಯಮಿತದ ಮುಖ್ಯ ಪ್ರವರ್ತಕರಾದ ದಯಾನಂದ ಸ್ವಾಮಿ ಅವರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೆಸರು ಅನುಮೋದಿಸಿದರು. ಸಭೆಯು ಇದಕ್ಕೆ ಒಕ್ಕೊರಲನಿಂದ ಒಪ್ಪಿಗೆ ಸೂಚಿಸಿ, ಸ್ವಾಗತಿಸಿತು.ದಾವಣಗೆರೆ ತರಳಬಾಳು ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ. ಅನಿಲ್ ಕುಮಾರ್ ನಾಯ್ಕ್ ಹಾಗೂ ಉಪಾಧ್ಯಕ್ಷರಾಗಿ ನಿಯುಕ್ತಿಯಾದ ಬಿ. ಸಿದ್ದಪ್ಪ ಅವರಿಗೆ ಸಭೆಯಲ್ಲಿ ಹಾಜರಿದ್ದವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.ಸಭೆಯಲ್ಲಿ ಎ. ಕೆ. ಫೌಂಡೇಶನ್ ಅಧ್ಯಕ್ಷರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್, ಅಜಯ್ ಕುಮಾರ್, ಕಲ್ಲೇಶ್, ಸೈಯ್ಯದ್ ಫಕ್ರುದ್ದೀನ್, ಚಂದ್ರಿಕಾ ಜಗನ್ನಾಥ್, ಮಮತಾ ಸುರೇಶ್, ಶೈಲಜಾ, ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ಮಾಜಿ ಅಧ್ಯಕ್ಷ ತ್ಯಾವಣಗಿ ಕೃಷ್ಣಕುಮಾರ್, ಶಾಮನೂರು ನಾಗರಾಜ್, ನವೀನ್ ಕುಮಾರ್, ಅಗಸನಕಟ್ಟೆ ಷಣ್ಮುಖಯ್ಯ, ಸಿದ್ದನೂರು ನಾಗರಾಜ್ ಇನ್ನು ಹಲವರು ಹಾಜರಿದ್ದರು.