ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.08: ತಾಲೂಕು ಬ್ರಾಹ್ಮಣರ ಸಂಘ ಮತ್ತು ಶ್ರೀ ಗುರುರಾಜ ಅಷ್ಟೋತ್ತರ ಮಂಡಳಿ ಸಹಯೋಗದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀಮದ್ ಜಯತೀರ್ಥರ ಆರಾಧನೆ ನಗರದ ರಾಯರ ದೇವಸ್ಥಾನದಲ್ಲಿ ಆಚರಣೆ ಮಾಡಲಾಯಿತು.
ಆಷಾಢ ಮಾಸ ಕೃಷ್ಣ ಪಕ್ಷ ಪಂಚಮಿ ತಿಥಿಯ ಶುಕ್ರವಾರ ಶ್ರದ್ಧಾಭಕ್ತಿಗಳೊಡನೆ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ಜರುಗಿಸಲಾಯಿತು ಆರಾಧನಾ ಕಾರ್ಯಕ್ರಮಗಳ ನಿಮಿತ್ತ ಬೆಳಗ್ಗೆ 7-8 ಗಂಟೆಯವರೆಗೂ ಅಷ್ಟೋತ್ತರ ಪಾರಾಯಣ 9 ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ಒಂದು ಗಂಟೆಗೆ ಮಹಾನೈವೇದ್ಯ ಹಾಗೂ ಪಲ್ಲಕ್ಕಿ ಸೇವೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆಚರಣೆಗೊಂಡು ನಂತರ ತೀರ್ಥ ಪ್ರಸಾದಗಳು ಭಕ್ತರಿಗೆ ನೀಡಲಾಯಿತು.
ಶ್ರೀ ಗುರುರಾಜ ಅಷ್ಟೋತ್ತರ ಮಂಡಳಿಯವರು ಹಾಗೂ ಸಿರುಗುಪ್ಪ ತಾಲೂಕು ಬ್ರಾಹ್ಮಣರ ಸಂಘದ ವಿಪ್ರ ಪಂಡಿತರು ಈ ಆರಾಧನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
One attachment • Scanned by Gmail