ಶ್ರೀ ಜಗ ಜ್ಯೋತಿ ಬಸವಣ್ಣ ಭಾವಚಿತ್ರ ಅದ್ದೂರಿ ಮೆರವಣಿಗೆ

ವಿಜಯಪುರ.ಮೇ೧೨:ನಗರ್ತ ಯುವಕ ಸಂಘವು ಸುಮಾರು ೨೫ ವರ್ಷಗಳಿಂದ ಯಶಸ್ವಿಯಾಗಿ ಬಸವ ಜಯಂತಿ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಅ.ಶಿ.ವೈ ನಗರ್ತ ಯುವಕ ಸಂಘದ ಕಾರ್ಯಧ್ಯಕ್ಷರಾದ ಜೆ ಆರ್ ಪಿ ಮುರುಳೀಧರ್ ತಿಳಿಸಿದರು
ಅವರು ಪಟ್ಟಣದಲ್ಲಿರುವ ಗಾಂಧಿ ಚೌಕದಲ್ಲಿ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಯುವಕ ಸಂಘ ಮತ್ತು ಶ್ರೀ ನಗರೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಮತ್ತು ರಾಷ್ಟ್ರೀಯ ಬಸವದಳ ಸಂಯುಕ್ತ ಆಶ್ರಯದಲ್ಲಿ ಕ್ರಾಂತಿಯೋಗಿ ವಿಶ್ವಗುರು ಬಸವಣ್ಣನವರ ೮೯೧ನೆಯ ಜಯಂತಿಯ ಅಂಗವಾಗಿ ಸಂಜೆ ಜಗಜ್ಯೋತಿ ಬಸವಣ್ಣನವರ ಪಂಚಲೋಹ ಮೂರ್ತಿಯನ್ನು ಆನೇಕಲ್ ನಗರದ ಹಂಸ ರಥದೊಂದಿಗೆ ಕೇರಳದ ಸುಪ್ರಸಿದ್ಧ ಸಾಗರಂ ಕಲಾ ತಂಡ ಸಮಿತಿಯ ಚಂಡೆ ವಾದ್ಯದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಏರ್ಪಡಿಸಲಾಗಿದ್ದ ಮೆರವಣಿಗೆಯನ್ನು ಉದ್ಘಾಟಿಸಿ, ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಹಂಸ ವಾಹನ ಪಲ್ಲಕ್ಕಿ ಸೇವೆಯನ್ನು ಒದಗಿಸಿದ ಪುರಸಭಾ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಎಂ. ಸತೀಶ್ ಕುಮಾರ್ ಮತ್ತು ಸಹೋದರರು, ಚೆಂಡೆ ವಾದ್ಯ ಸೇವೆಯನ್ನು ಒದಗಿಸಿದ ಎ ಆರ್ ಸಿ. ನವೀನ್ ಕುಮಾರ್, ಚಿಕ್ಕ ವೀರಣ್ಣ ಮಿಠಾಯಿ ಅಂಗಡಿ ಮಾಲೀಕರಾದ ಸಿ ಸುರೇಶ್, ಹಾಗೂ ಅಜಿತ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳಗ್ಗೆ ಬಾದಾಮಿ ಹಾಲು ಸೇವೆ, ರಾತ್ರಿ ದಾಸೋಹ ಸೇವೆಯನ್ನು ಲಿಂಗೈಕ್ಯ ಶಾರದಮ್ಮ ಚಿಕ್ಕ ಗುಂಡಪ್ಪ ಸ್ಮರಣಾರ್ಥವಾಗಿ ಆರ್ ರಾಜಣ್ಣ ಮತ್ತು ಸಹೋದರರು ಸೇವೆಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ನಗರ್ತ ಯುವಕ ಸಂಘದ ಅಧ್ಯಕ್ಷರ ಬೇಕರಿ ಮಂಜುನಾಥ್, ಮಹಂತಿನ ಮಠದ ಅಧ್ಯಕ್ಷರಾದ ಪುನೀತ್ ಶಿವಕುಮಾರ್, ಗೌರವ ಕಾರ್ಯದರ್ಶಿಗಳಾದ ವಿ ವಿಶ್ವನಾಥ್, ಬೇಕರಿ ಶಿವಣ್ಣ, ವಿ ಬಸವರಾಜ್ ಮತ್ತು ಅಂಗ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.