ಶ್ರೀ ಜಗದ್ಗುರು ರೇಣುಕಾಚಾರ್ಯರ ಭಕ್ತಿಯ ಪ್ರವಚನಗಳು ಇಂದಿಗೂ ಪ್ರಸ್ತುತ 

ಸಂಜೆವಾಣಿ ವಾರ್ತೆ

ದಾವಣಗೆರೆ ಮಾ.೨೪; ಜಗದ್ಗುರು ರೇಣುಕಾಚಾರ್ಯ  ಆದರ್ಶವಾದಿ, ಸಮಾಜಕ್ಕೆ ಅಹಿಂಸೆ, ಆಧ್ಯಾತ್ಮಿಕ ಚಿಂತನೆ ಹಾಗೂ ಭಕ್ತಿ, ಭಾವನೆಗಳನ್ನು ಸಮಾಜಕ್ಕೆ  ನೀಡುವ ಮೂಲಕ ಮಾದರಿ ಸಮಾಜ ನಿರ್ಮಾಣದ ಬುನಾದಿ ಹಾಕಿದವರು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.ಅವರು  ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಸಮಾಜ,  ಇವರುಗಳ ಸಂಯುಕ್ತಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ  ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ವಿಶ್ವದಲ್ಲಿ ಶಾಂತಿಯನ್ನು ನೆಲೆಸಲು ಹಾಗೂ ವೀರಶೈವ ಧರ್ಮ ಒಂದು ಉತ್ತಮ ಹಾದಿಯಲ್ಲಿ ನಡೆಸುವುದರಲ್ಲಿ ಕಾರಣಿಭೂತರಾಗಿದ್ದಾರೆ. ಎಲ್ಲರಿಗೂ ಸಮಾನ ಚಿಂತನೆಗಳನ್ನು ನೀಡಿ  ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅವರ ಕಾಣಿಕೆ ಬಹಳ ಅತ್ಯುತ್ತಮವಾದುದು. ಇಂತಹ ಮಹಾನ್ ಪುರುಷರ ಜಯಂತಿಗಳನ್ನು ನಾವು ಸರಳವಾಗಿ ಮಾಡಿದ್ದೇವೆ, ಹಾಗೂ ಇವರ ಮಾರ್ಗ ಅನುಸರಿಸಿದಾಗ ನಮ್ಮ ಸಮಾಜ ಸಮೃದ್ಧಿಯಾಗಲಿದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಸೈಯ್ಯದಾ  ಆಫ್ರೀನ ಭಾನು ಎಸ್. ಬಳ್ಳಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ನಿರ್ದೇಶಕರಾದ ಇಂದುಧರ್ ನಿಶಾನಿಮಠ, ರೈತ ಮುಖಂಡರಾದ ಬಲ್ಲೂರು ರವಿಕುಮಾರ, ಜಂಗಮ ಸಮಾಜದ ಮುಖಂಡರು ಸಿದ್ದಲಿಂಗ ಸ್ವಾಮಿ, ಡಿ.ಎಂ. ಜಯದೇವಪ್ಪ, ದ್ರಾಕ್ಷಣಮ್ಮ ನಿಟ್ಟುವಳ್ಳಿ ಸುವರ್ಣಮ್ಮ ಎಂಸಿಎ ಬ್ಲಾಕ್, ಚಂದ್ರಮ್ಮ, ವಿನುತಾ ರವಿ, ರೇವಣಸಿದ್ದೇಶ್ ಎಂ ಆರ್, ರುದ್ರಮುನಿ ಸ್ವಾಮಿ, ಶ್ರೀಶೈಲ ಮಠದ ವೈದಿಕ ಪಾಠಶಾಲಾ ಮಕ್ಕಳು ಇನ್ನಿತರರಿದ್ದರು.