ಶ್ರೀ ಚೈತನ್ಯ ಟೆಕ್ನೋ ಶಾಲೆ : ರಕ್ತದಾನ ಶಿಬಿರ

ರಾಯಚೂರು.ನ.೦೭- ಶ್ರೀ ಚೈತನ್ಯ ಟೆಕ್ನೋ ಶಾಲೆ, ರಾಯಚೂರು ಮತ್ತು ಭಾರತೀಯ ವೈದ್ಯಕೀಯ ಸಂಘ ಇವರ ಸಹಯೋಗದೊಂದಿಗೆ ಸಂಸ್ಥೆಯ ಸಂಸ್ಥಾಪಕರಾದ ಡಾ.ಬಿ.ಜಾನ್ಸಿ ಲಕ್ಷ್ಮೀಬಾಯಿ ಅವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ವರ್ಷವೂ ಶಾಲೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳುವುದು ಶಾಲೆಯ ಸಂಸ್ಥಾಪಕರ ಉದ್ದೇಶವಾಗಿದೆ. ” ರಕ್ತದಾನ ಮಾಡಿ ಜೀವ ಉಳಿಸಿ ” ಎಂಬ ಶಿಬಿರದಲ್ಲಿ ೪೦ ರಿಂದ ೫೦ ಜನ ಶಿಕ್ಷಕರು ಪಾಲಕರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಎಂ.ಎಸ್.ಜೋಸೆಫ್, ಎನ್.ಗೀತಾ, ಉಪ ಪ್ರಾಂಶುಪಾಲರಾದ ದತ್ತಾತ್ರೇಯ ವಲ್ಕಮ್ ದಿನ್ನಿ ಹಾಗೂ ವೇಣುಗೋಪಾಲ್ ಪೋತರಾಜ್, ಬೋಧಕರು ಮತ್ತು ಬೋಧಕೇತರು ಪಾಲ್ಗೊಂಡು ಈ ಶಿಬಿರವನ್ನು ಯಶಸ್ವಿಗೊಳಿಸಿದರು.