ಶ್ರೀ ಚೈತನ್ಯ ಟೆಕ್ನೋ ಶಾಲೆಗೆ ಶೇ.೧೦೦ ರಷ್ಟು ಫಲಿತಾಂಶ

ರಾಯಚೂರು,ಜು.೨೫- ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಸಿಬಿಎಸ್‌ಸಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಶೇ.೧೦೦ ರಷ್ಟು ಫಲಿತಾಂಶ ಲಭಿಸಿದೆ.
೨೦೨೧-೨೨ ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ೧೩೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೯೦ ಮೇಲ್ಪಟ್ಟು ೨೦ ವಿದ್ಯಾರ್ಥಿಗಳು ಶೇ. ೮೫ ಮೇಲ್ಪಟ್ಟು ೧೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ೬೮ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ೩೦ ವಿದ್ಯಾರ್ಥಿಗಳು ಶ್ರೇಣಿಯಲ್ಲಿ ಪಾಸಗಿದ್ದಾರೆ.ಇವರಲ್ಲಿ ಪ್ರಥಮ ಶ್ರೇಣಿಯಲ್ಲಿ ಅಬ್ದುಲ್ ಹೂಜೈಪ್ ೫೦೦ ಅಂಕಗಳಿಗೆ ೪೮೧ ಅಂಕ ಪಡೆದಿದ್ದಾರೆ.ದ್ವಿತೀಯ ಶ್ರೇಣಿಯಲ್ಲಿ ಬಿಂದ್ರಾ ೫೦೦ ಅಂಕಗಳಿಗೆ ೪೭೯ ಅಂಕ ಪಡೆದಿದ್ದು,ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥಾಪಕರು ಶುಭಾ ಹಾರೈಸಿದ್ದಾರೆ.