ಶ್ರೀ ಚನ್ನಮಲ್ಲೇಶ್ವರ ಶಾಲೆಗೆ ಉತ್ತಮ ಫಲಿತಾಂಶ

ಕಲಬುರಗಿ ; ಮೇ.9: ನಗರದ ಶಹಾಬಜಾರನಲ್ಲಿನ ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಚನ್ನಮಲ್ಲೇಶ್ವರ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಫಲಿತಾಂಶ ಬಂದಿದೆ.
ಸೌಮ್ಯ ತಂ.ಅಶೋಕ ಶೇ. 549(87.84%), ರಿತೇಶ ತಂ. ಅರುಣಕುಮಾರ ಶೇ. 542 (86.72%), ಸಾಕ್ಷಿ ತಂ. ತುಳಜಾರಾಮ ಶೇ. 539 (86.24%), ಭಾಗ್ಯಶ್ರೀ ತಂ. ಗೌರಿಶಂಕರ ಶೇ. 515 (82.4%) ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಮಕ್ಕಳ ಈ ಸಾಧನೆಗೆ ಶಾಲೆಯ ಅಧ್ಯಕ್ಷರಾದ ಸಿದ್ರಾಮಪ್ಪ ಉಕ್ಕಲಿ, ಕಾರ್ಯದರ್ಶಿ ಧೂಳಪ್ಪ ಹಾದಿಮನಿ, ಆಡಳಿತ ಮಂಡಳಿ ಸರ್ವ ಸದಸ್ಯರು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳು ತಿಳಿಸಿದರು.