ಶ್ರೀ ಚನ್ನಬಸವಾನಂದ ಸ್ವಾಮೀಜಿ ಬೆಂಬಲಿಗರ ಬಣ ಹಾಗೂ ರಾಷ್ಟ್ರೀಯ ಬಸವ ದಳದ ಅನುಯಾಯಿಗಳ ನಡುವೆ ವಾಗ್ವಾದ

ಬಸವಕಲ್ಯಾಣ:ಸೆ.3: ಪೂಜ್ಯ ಜಗದ್ಗುರು ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ಕಲ್ಯಾಣ ಪರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿಯ ಬಸವ ಮಹಾಮನೆಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಶ್ರೀ ಚನ್ನಬಸವಾನಂದ ಸ್ವಾಮೀಜಿ ಬೆಂಬಲಿಗರ ಬಣ ಹಾಗೂ ರಾಷ್ಟ್ರೀಯ ಬಸವ ದಳದ ಅನುಯಾಯಿಗಳ ನಡುವೇ ವಾಗ್ವಾದ ನಡೆದ ಪ್ರಸಂಗ ಜರುಗಿದೆ.

ಕಲ್ಯಾಣ ಪರ್ವದ ಪೂರ್ವ ಸಿದ್ಧತಾ ಸಭೆಯಲ್ಲಿ ಎರಡು ಬಣಗಳ ನಡುವೇ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ಸ್ಥಳದಲಿದ್ದ ನಗರ ಠಾಣೆ ಪಿಎಸ್‍ಐ ಅಮರ ಕುಲ್ಕರ್ಣಿ ನೇತೃತ್ವದ ಪೊಲೀಸರ ತಂಡ ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ.

ಶ್ರೀ ಚನ್ನಬಸವಾನಂದ ಸ್ವಾಮೀಜಿ ಸೇರಿದಂತೆ ಅವರ ಬೆಂಬಲಿಗರಿಗೆ ಸಭೆಗೆ ಆಹ್ವಾನಿಸದೇ ಸಬೆ ನಡೆಸಿದ್ದಕ್ಕೆ ಆಕ್ರೋಶಗೊಂಡು ಶ್ರೀಗಳ ಬೆಂಬಲಿಗರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡು ಬಣಗಳ ನಡುವೇ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪತ್ತು ಎನ್ನಲಾಗಿದೆ.

ಈ ವೇಳೆ ಮಾತನಾಡಿದ ಶ್ರೀ ಚನ್ನಬಸವಾನಂದ ಸ್ವಾಮೀಜಿ, ಕಳೆದ ಒಂದುವರೆ ದಶಕದಿಂದ ಮಾತಾಜಿ ನೇತೃತ್ವದಲ್ಲಿ ಎಲ್ಲರು ಸೇರಿ ಕಾರ್ಯಕ್ರಮ ನಡೆಸುತದ್ದೆವು. ಆದರೆ ಜಗದ್ಗುರು ಗಂಗಾ ಮಾತಾಜಿ ಅವರು ಕೆಲವರ ಮಾತು ಕೇಳುವ ಮೂಲಕ ರಾಷ್ಟ್ರೀಯ ಬಸವದಳ ಕಟ್ಟಿ ಬೆಳೆಸಿದ ಬಸವಾನುಯಾಯಿಗಳನ್ನು ದೂರ ವಿಟ್ಟು ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದು ಸರಿಯಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವೇ ದಿನಗಳಲ್ಲಿ ನಡೆಯಲಿರುವ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ನಾವೇಲ್ಲರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸುತ್ತೆವೆ. ಏಕ ಪಕ್ಷೀಯವಾಗಿ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ. ನಾವೇಲ್ಲರು ಸೇರಿ ಮತ್ತೋಮ್ಮೆ ಸಭೆ ನಡೆಸಿ ಚರ್ಚಿಸುತ್ತೆವೆ ಎಂದು ಶ್ರೀ ಚನ್ನಬಸವಾನಂದ ಸ್ವಾಮೀಜಿ ಘೋಷಿಸಿದರು. ಇದೇ ವೇಳೆ ಮಾತೆ ಗಂಗಾದೇವಿ ಅವರ ವಿರುದ್ಧ ಚನ್ನಬಸವಾನಂದ ಸ್ವಾಮೀಜಿ ಸೇರಿದಂತೆ ಅವರ ಬೆಂಬಲಿಗರು ೀಕ್ಕಾರ ಘೋಷಣೆ ಕೂಗಿದ ಪ್ರಸಂಗವು ಜರುಗಿತು.