ಶ್ರೀ ಚನ್ನಬಸವಸ್ವಾಮೀಜಿಗಳಿಂದ 2021ರ ದಿನದರ್ಶಿಕೆ ಬಿಡುಗಡೆ

ಚಾಮರಾಜನಗರ, ಡಿ. 29- ಮಾಜಿ ಶಾಸಕ ದಿ. ಶ್ರೀ ಗುರುಸ್ವಾಮಿ ಹಿತೈಷಿಗಳ ಬಳಗ ಹಾಗೂ ವಕೀಲೆ ಜಿ. ನಾಗಶ್ರೀ ಪ್ರತಾಪ್ ಅವರ ಅಭಿಮಾನಿಗಳ ಬಳಗದಿಂದ ಹೊರ ತಂದಿರುವ 2021ರ ದಿನದರ್ಶಿಕೆಯನ್ನು ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ಇಂದು ಬಿಡುಗಡೆ ಮಾಡಿದರು.
ನಗರದ ಶ್ರೀಮಠದ ಅವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನಪ್ರಿಯರಾಗಿದ್ದ ಸರಳ ಸಜ್ಜನಿಕೆ ಮಾಜಿ ಶಾಸಕರಾದ ದಿ. ಸಿ. ಗುರುಸ್ವಾಮಿ ಅವರ ನಿಧನ ಅಘಾತವನ್ನುಂಟು ಮಾಡಿದೆ. ಅವರ ಹಿತೈಷಿಗಳು ಅವರ ಭಾವಚಿತ್ರವಿರುವ ಕ್ಯಾಲೆಂಡರ್ ಅನ್ನು ಪ್ರಕಟಿಸಿ ಅವರು ನೆನಪು ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಯುವ ರಾಜಕಾರಣಿಯಾಗಿ ತಂದೆಯವರ ಹಾದಿಯಲ್ಲಿ ಸಾಗುತ್ತಿರುವ ವಕೀಲೆ ಜಿ. ನಾಗಶ್ರೀಪ್ರತಾಪ್ ಅವರ ಅಭಿಮಾನಿಗಳು ಸಹ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗುರುಸ್ವಾಮಿ ಅವರಂತೆ ಅವರ ಮಗಳಾದ ನಾಗಶ್ರೀ ಪ್ರತಾಪ್ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ಆ ಮೂಲಕ ಸಮಾಜ ಮತ್ತು ಸಮುದಾಯಕ್ಕೆ ಅವರ ಸೇವೆ ಇನ್ನು ಹೆಚ್ಚು ದೊರೆಯಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಡಾ. ಪರಮೇಶ್ವರಪ್ಪ, ಮುಖಂಡರಾದ ಆರ್. ಪುಟ್ಟಮಲ್ಲಪ್ಪ, ಸಿದ್ದಮಲ್ಲಪ್ಪ, ಗೌಡ್ರ ಸುರೇಶ್, ಡಿ.ಎನ್. ಪರಶಿವಮೂರ್ತಿ, ತೊರವಳ್ಳಿ ಕುಮಾರ್, ಗಿರೀಶ್ ಕಾಗಲವಾಡಿ, ಹೊನ್ನಹಳ್ಳಿ ಸಂಪತ್ತು, ಸಂತೊಷ್ ಹೆಬ್ಬಸೂರು, ರಾಜಶೇಖÀರ್, ಬಾಬು, ಹೊನ್ನಹಳ್ಳಿ ಹರೀಶ್, ಆನಂದ್, ಶಿವಕುಮಾರ್, ಪ್ರವೀಣ್ ಮೊದಲಾಧವರು ಇದ್ದರು.