
ಮುನವಳ್ಳಿ,ಏ4: ಸಮೀಪದ ಬಸರಗಿ ಇನಾಂ ಗ್ರಾಮದ ಶ್ರೀ ದ್ಯಾಮವ್ವ ದುರ್ಗಾದೇವಿ ಜಾತ್ರಾ ಮಹೊತ್ಸವ ಇಂದಿನಿಂದ ಎ.12 ರವರೆಗೆ ಜರುಗುವದು.
ದಿ. 5 ಊರಿನ ಪ್ರಮುಖ ಬೀದಿಗಳಲ್ಲಿ ದೇವಿಯ ಮೂರ್ತಿ ಮೆರವಣಿಗೆ ಸಂಜೆ 5 ಗಂಟೆಗೆ ಮಹಾ ರಥೋತ್ಸವ ಜರುಗುವದು. ರಾತ್ರಿ 10-30 ಕ್ಕೆ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ಎಂಬ ಸಾಮಾಜಿಕ ನಾಟಕ ಪ್ರದರ್ಶನ.
ದಿ.6 ಸಂಜೆ 6 ಗಂಟೆಗೆ 55 ಕೆ.ಜಿ ಒಳಗಿನ ಹೊನಲು ಬೆಳಕಿನ ಮ್ಯಾಟ ಕಬಡ್ಡಿ ಪಂದ್ಯಾವಳಿಗಳು, ಪ್ರಥಮ 25000, ದ್ವಿತೀಯ 20000, ತೃತೀಯ 15000 ಚತುರ್ಥ 10000 ವಿಜೇತರಿಗೆ ಬಹುಮಾನ ನೀಡುವರು.
ದಿ.7 ದೇವಿಗೆ ಅಕ್ಕಪಕ್ಕದ ಗ್ರಾಮಗಳಿಂದ ಉಡಿತುಂಬುವ ಕಾರ್ಯಕ್ರಮ, ಆಶದರ ಪದಗಳು, ಡೊಳ್ಳಿನ ಪದಗಳು ನಂತರ ಪುರುಷರ ಓಟದ ಸ್ಪರ್ಧೆ, ರಾತ್ರಿ 10-30 ಕ್ಕೆ ಕೆರಳಿದ ವೀರಕೇಸರಿ ಸಾಮಾಜಿಕ ನಾಟಕ ಪ್ರದರ್ಶನ.
ದಿ.8 ಸ್ಲೋ ಮೊಟರ್ ಸೈಕಲ್ ಸ್ಪರ್ಧೆ, ರಾತ್ರಿ 10-30 ಕ್ಕೆ ಉರಿಗಣ್ಣಿನ ಹುಲಿ ಸಾಮಾಜಿಕ ನಾಟಕ ಪ್ರದರ್ಶನ.
ದಿ.9 ಓಪನ್ ಟಗರಿನ ಕಾಳಗ ಸ್ಪರ್ಧೆ, ರಾತ್ರಿ ಸೇಡಿಗಾಗಿ ಸಿಡಿದೆದ್ದ ಶಿವನಾಗ ಸಾಮಾಜಿಕ ನಾಟಕ ಪ್ರದರ್ಶನ.
ದಿ.10 ಹಗ್ಗ ಜಗ್ಗಾಟ ಸ್ಪರ್ಧೆ, ಸಂಜೆ ಬಯಲು ಕುಸ್ತಿಗಳು, ಭಗೀರಥ ಹಿಡಿದ ಬಹದ್ದೂರ ಕೊಡ್ಲಿ ನಾಟಕ ಪ್ರದರ್ಶನ.
ದಿ. 11 ಉಡಿತುಂಬುವದು, ಕುದುರೆ ಮಜಲು, ತುಂಬಿದ ಚೀಲ ಹೊತ್ತುಕೊಂಡು ಹೋಗುವ ಸ್ಪರ್ಧೆ, ರಾತ್ರಿ ಧರ್ಮದ ಕಣ್ಣೀರು ಸಾಮಾಜಿಕ ನಾಟಕ.
ದಿ.12 ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶ್ರೀ ದೇವಿಯು ಹೊನ್ನಾಟ ಆಡುವಳು ನಂತರ ದೇವಿಯು ಸೀಮೆಗೆ ಹೋಗುವುದು,
ಪ್ರತಿದಿನ ಅನ್ನಪ್ರಸಾದ ಜರುಗುವುದು ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು 9972106346, 9741494743 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಜಾತ್ರಾ ಕಮಿಟಿಯವರು ತಿಳಿಸಿರುವರು.