ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ

ಮುನವಳ್ಳಿ,ಏ20: ಸಮೀಪದ ಉಜ್ಜಿನಕೊಪ್ಪ ಗ್ರಾಮದಲ್ಲಿ ಶ್ರೀ ಗ್ರಾಮದೇವಿ ಶ್ರೀ ದ್ಯಾಮಮ್ಮದೇವಿ, ಹಾಗೂ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಏ. 18 ರಿಂದ ಪ್ರಾರಂಭವಾಗಿದ್ದು, ಇಂದು ಹರದೇಶಿ ಶ್ರೀ ರಾಮಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಮತ್ತು ನಾಗೇಶಿ ಶ್ರೀ ಲಕ್ಷ್ಮೀ ಡೊಳ್ಳಿನ ಗಾಯನ ಸಂಘದಿಂದ ಜಿದ್ದಾಜಿದ್ದಿ ಡೊಳ್ಳಿನ ಪದಗಳ ಸ್ಪರ್ಧೆ ಜರುಗುವುದು.
ದಿ.21 ಬೆಳಗ್ಗೆ 11 ಗಂಟೆಗೆ ಭಾರಿ ತೆರಿ ಬಂಡಿ ಸ್ಪರ್ಧೆ ಜರುಗುವದು.
ದಿ. 22 ಬೆಳಗ್ಗೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ದೇವಿಯ ಮೆರವಣಿಗೆ ಹಾಗೂ ಪ್ರತಿ ಮನೆಗೆ ದೇವರ ಭೇಟಿ ನೀಡುವುದು.
ದಿ. 23 ಸಂಜೆ ಸಂಗೀತ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವದು.
ದಿ.24 ಬೆಳಗ್ಗೆ 11 ಗಂಟೆಗೆ ಟ್ರಾಕ್ಟರ್ ರಿವರ್ಸ ಸ್ಪರ್ಧೆ.
ದಿ. 25 ಬೆಳಗ್ಗೆ ಸದ್ಬಕ್ತರಿಂದ ಶ್ರೀದೇವಿಗೆ ಉಡಿ ತುಂಬುವುದು, ಹಗ್ಗ ಜಗ್ಗಾಟ, ಸಂಗೀತ ರಸಮಂಜರಿ ಜರುಗುವುದು.
ದಿ. 26 ರಂದು ಶ್ರೀ ದೇವಿಯ ಹೊನ್ನಾಟ ಹಾಗೂ ಸೀಮೆಗೆ ಹೋಗುವದು. ಮಹಾಪ್ರಸಾದದೊಂದಿಗೆ ಜಾತ್ರೆ ಮಂಗಳವಾಗುವದು ಎಂದು ಜಾತ್ರಾ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿರುವರು.