ಶ್ರೀ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ  ಕಳವು; ಕ್ರಮಕ್ಕೆ ಆಗ್ರಹ

ದಾವಣಗೆರೆ.ಸೆ.೪: ಹರಿಹರ ತಾಲೂಕಿನ ಗಂಗನರಸಿ ಗ್ರಾಮದ ಹೊರವಲಯದಲ್ಲಿ ಇರುವ ಶ್ರೀ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಕಬ್ಬಿಣ ಮತ್ತಿತರೆ ಸಾಮಗ್ರಿಗಳನ್ನು ಕಳವು ಮಾಡಿದವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗಂಗನರಸಿ ಮಠದ ಡಾ. ಕರಿಬಸಯ್ಯ ಮಠದ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಒಬ್ಬರು ತಾವೇ ಮಠದ ಅಧ್ಯಕ್ಷರು ಎಂದು ಹೇಳಿಕೊಂಡು ಮಠಕ್ಕೆ ಸಂಬಂಧಿಸಿದಂತೆ ಅನೇಕ ಸಾಮಗ್ರಿಗಳನ್ನು ಯಾರಿಗೂ ಗೊತ್ತಾಗದೆ ಮಾರಾಟ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭಕ್ತ ರೊಬ್ಬರು ಮಠಕ್ಕೆ 13 ಟನ್ ಕಬ್ಬಿಣ ಕೊಡಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಕಬ್ಬಿಣ ಕಳವಾಗಿದೆ. ಮಠದ ಕಾರ್ಯದರ್ಶಿ ಅವರಿಗೆ ಕಳವಾಗಿರುವ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪೊಲೀಸರ ಗಮನಕ್ಕೆ ತರಲಾಗಿದೆ. ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಸೆ. 5 ರಂದು  ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು.ಮಠದ ಸಂಪ್ರದಾಯ ಪ್ರಕಾರ ಸಂಸಾರಸ್ಥರು ಮಠದ ಅಧ್ಯಕ್ಷರಾಗಬಹುದು.‌ ಅದರಂತೆ ನಮ್ಮ ದೊಡ್ಡಪ್ಪನವರ ನಂತರ ಅವರ ಮಗ ಅಧ್ಯಕ್ಷರಾಗಿದ್ದರು. ಕಳೆದ ಐದು ವರ್ಷದಿಂದ ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಜೀವಂತವಾಗಿದ್ದರೂ ಬೇರೆಯವರನ್ನು ಖಜಾಂಚಿಯಾಗಿ ನೇಮಕ ಮಾಡಿಕೊಂಡು ಮಠದ ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದಾರೆ ಎಂದು ತಿಳಿಸಿದರು.

Attachments area