ಶ್ರೀ ಗೋಣಿ ಬಸವೇಶ್ವರಸ್ವಾಮಿ ಸಮುದಾಯ ಭವನ ಉದ್ಘಾಟನೆ

ದಾವಣಗೆರೆ.ಮಾ.೨೬; ಹರಿಹರ ತಾಲೂಕಿನ ಗಂಗನರಸಿ ಗ್ರಾಮದಲ್ಲಿ‌ ಶ್ರೀ ಗೋಣಿ ಬಸವೇಶ್ವರಸ್ವಾಮಿ ಹೊರಮಠ ಹಾಗೂ ಶ್ರೀ ಹನುಮಂತದೇವರ ಜೀರ್ಣೋದ್ಧಾರ ಸಮಿತಿ  ಆಶ್ರಯದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಗೋಣಿ ಬಸವೇಶ್ವರಸ್ವಾಮಿ ಸಮುದಾಯ ಭವನ ಊಟದ ಹಾಲ್ ಹಾಗೂ ಸರ್ವಧರ್ಮೀಯರ ಉಚಿತ ಸಾಮೂಹಿಕ ವಿವಾಹವನ್ನು ಏಪ್ರಿಲ್ ೨೪ ರಂದು ಬೆಳಗ್ಗೆ ೧೧.೩೦ ಕ್ಕೆ‌ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು ಏ 23 ರಂದು ಶ್ರೀ ಬಸವಜಯಂತಿಯಂದು ನಡೆಯುವ ಸಮಾರಂಭದಲ್ಲಿ ಕಾಗಿನೆಲೆ – ಬೆಳ್ಳೂಡಿ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಶ್ರೀ, ಮಪಾಸ್ವಾಮಿಗಳು,ಶ್ರೀ ಕೂಲಹಳ್ಳಿ ಗೋಣಿಬಸವೇಶ್ವರಸ್ವಾಮಿ ಮಠದ ಶ್ರೀ ಪಟ್ಟದ ಚಿನ್ಯಯ ಸ್ವಾಮೀಜಿ,ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ,ವೀರಶೈವ ಲಿಂಗಾಯಿತ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀ, ಸಾಣೆಹಳ್ಳಿ ಮಠದಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ ಎಂದರು.ಊಟದ ಹಾಲ್ ಉದ್ಘಾಟನೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಠದ ಅಧ್ಯಕ್ಷ  ಜಿ. ಎಂ. ನಾಗೇಂದ್ರಪ್ಪ , ಅಧ್ಯಕ್ಷತೆ ವಹಿಸಲಿದ್ದಾರೆಂದರು.ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷ ಗಂಗನರಸಿ ಜಿ.ಎಂ.ನಾಗೇಂದ್ರಪ್ಪ, ಪದಾಧಿಕಾರಿಗಳಾದ ಎಲ್.ಡಿ.ಗೋಣೇಪ್ಪ, ಹೆಚ್.ಬಿ.ಗೋಣೇಪ್ಪ, ಹೆಚ್. ಬಸವರಾಜಪ್ಪ ಸುಲ್ತಾನಪ್ಪರ ಕಕ್ಕರಗೊಳ್ಳ, ಕುಣಿಬೆಳಕೆರೆ ರುದ್ರಪ್ಪ, ಕೆ.ಬಿ.ರಾಜಶೇಖರ, ದಿಟೂರು ನಾಗರಾಜ್ ಇತರರು ಇದ್ದರು.