ಶ್ರೀ ಗುರು ಮಲಯಶಾಂತೇಶ್ವರ ಮಹಾ ರಥೋತ್ಸವ 25 ರಂದು21 ರಿಂದ ಶಾಂತೇಶ್ವರ ಮಹಾ ಪುರಾಣ

ಕಲಬುರಗಿ : ಜ.19:ನೆನೆದು ಬಂದ ಸದ್ಭÀಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಲಬುರಗಿ ತಾಲೂಕಿನ ಹಿರೇನಂದೂರ ಗ್ರಾಮದ ಶ್ರೀ ಗುರು ಮಲಯ ಶಾಂತೇಶ್ವರರ 1081 ನೇ ಜಾತ್ರಾ ಮಹೋತ್ಸವದ ಭವ್ಯ ರಥೋತ್ಸವ ಇದೆ. 25 ರಂದು ಜರುಗಲಿದೆ.

ಕಳೆದೆರಡು ವರ್ಷ ಕೋರೊನ ಸಾಂಕ್ರಮೀಕ ರೋಗದಿಂದ ಜಾತ್ರೆಯು ರದ್ದಾಗಿತ್ತು. ಆದರೆ ಈ ಬಾರಿ ಕೋವಿಡ್ ನಿರ್ಬಂದಗಳಿಲ್ಲದ ಕಾರಣ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ.

21 ರಿಂದ ಪುರಾಣ : ಶ್ರೀ ಮಠಲ್ಲಿ ಐದು ದಿನಗಳ ಕಾಲ ಸಂಜೆ 7 ಗಂಟೆಯಿಂದ 10 ಗಂಟೆಯ ವರೆಗೆ ಮಹಾನ ತಪಸ್ವಿ ಶ್ರೀ ಗುರು ಮಲಯ ಶಾಂತೇಶ್ವರ ದೇವರ ಪುರಾಣ ಕಾರ್ಯಕ್ರಮವು ಭಕ್ತಿ ಭಾವ ಸಡಗರದಿಂದ ನಡೆಯಲಿದೆ. ಪಾಳಾ ಕಟ್ಟಿಮನಿ ಹಿರೇಮಠದ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯ ಸ್ವಾಮಿಜಿಗಳು ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.

ಮಠದಲ್ಲಿ ಶಾಂತೇಶ್ವರ ಕತೃ ಗದ್ದುಗೆಗೆ ನಿತ್ಯ ಮಾಹಾ ಪೂಜೆ, ರುದ್ರಾಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

25 ರಂದು ಬೆಳಿಗ್ಗೆ 9 ಗಂಟೆಗೆ ಅಯ್ಯಚಾರ, ಲಿಂಗದೀಕ್ಷೆ ನಂತರ 11 ಗಂಟೆಯಿಂದ ಗ್ರಾಮದ ರಾಜಬಿದಿಯಲ್ಲಿ ಪಲ್ಲಕ್ಕಿ ಉತ್ಸವ, ಬಳಿಕ ಸಂಜೆ 6 ಗಂಟೆಗೆ ಮಹಾ ರಥೋತ್ಸವ ಜರುಗಲಿದ್ದು, ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಅಚಲೇರಾ ಹಿರೇಮಠದ ಸುತ್ರೇಶ್ವರ ಸ್ವಾಮೀಜಿಗಳು, ಓಂಕಾರ ಬೇನೂರಿನ ಸಿದ್ದರೇಣುಕ ಸ್ವಾಮೀಜಿಗಳು ಆಶಿರ್ವಚನ ನೀಡಲಿದ್ದಾರೆ. ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಮಡು, ಬಿಜೆಪಿ ಮುಖಂಡ ವಿನೋದ ಪಾಟೀಲ ಸರಡಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಊಭಯ ನಂದೂರು ಗ್ರಾಮಸ್ಥರು ಸೇರಿದಂತೆ ಧಾರ್ಮಿಕ, ರಾಜಕಿಯ ಹಾಗೂ ಸಾಮಾಜಿಕ ಕ್ಷೇತ್ರ ಮುಖಂಡರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 25 ಮತ್ತು 26 ರಂದು ರಾತ್ರಿ 10 ಗಂಟೆಯಿಂದ ಶೀಲ ಸುಟ್ಟರು-ನೀತಿ ಬಿಟ್ಟಿಲ್ಲ ಸಾಮಾಜಿಕ ನಾಟಕ ಪ್ರದರ್ಶನ ಗೊಳ್ಳಲಿದ್ದು, ಶ್ರೀ ಮಠದ ಎಲ್ಲ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಶಾಂತೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮಠದ ಧರ್ಮಾಧಿಕಾರಿ ಡಾ. ಗಂಗಾಧರ ಹಿರೇಮಠ ಹಾಗೂ ಉಭಯ ನಂದೂರು ಗ್ರಾಮಸ್ತರು ಪ್ರಕಟಣೆಯಲ್ಲಿ ಕೋರಿರುತ್ತಾರೆ.