ಶ್ರೀ ಗುರು ಫಕೀರೇಶ್ವರರ ಜಾತ್ರೆ ರದ್ದು

ಬಾಗಲಕೋಟೆ, ಮೇ 22 : ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ ಎಸ್.ಜಿ. ಗ್ರಾಮದಲ್ಲಿ ಮೇ 26 ರಂದು ಬುಧವಾರ ನಡೆಯಬೇಕಾಗಿದ್ದ ಐತಿಹಾಸಿಕ ಶ್ರೀ ಗುರು ಫಕೀರೇಶ್ವರ ರಥೋತ್ಸವ ಮತ್ತು ಬೃಹತ್ ಜಾನುವಾರು ಜಾತ್ರೆಯನ್ನು ಕರೋನಾ ಮಹಾಮಾರಿ ಹೆಚ್ಚಾಗಿದ್ದರಿಂದ ಸರಕಾರದ ಆದೇಶದ ಮೇರೆಗೆ ರದ್ದುಪಡಿಸಲಾಗಿದೆ ಎಂದು ಶ್ರೀ ಫಕೀರೇಶ್ವರ ವಿರಕ್ತಮಠದ ಪೂಜ್ಯರಾದ ಶ್ರೀ ಮ.ನಿ.ಪ್ರ.ಸ್ವ. ಪ್ರಭುಮಹಾಸ್ವಾಮಿಗಳು ಹೇಳಿದ್ದಾರೆ.
ಪ್ರಸ್ತುತ ಕರೋನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ಜಾತ್ರೆಯನ್ನು ರದ್ದುಪಡಿಸಲಾಗಿದ್ದು ಸರಕಾರದ ಆದೇಶದ ಪ್ರಕಾರ ಕೇವಲ ಪೂಜೆ ಪುನಸ್ಕಾರಗಳು ಅμÉ್ಟೀ ನಡೆಯುತ್ತವೆ. ಆದ್ದರಿಂದ ಭಕ್ತರು ಯಾರು ಶ್ರೀಮಠಕ್ಕೆ ಬರಬಾರದು, ಮತ್ತು ವಿವಿಧ ಜಿಲ್ಲೆಗಳಿಂದ ರೈತರು ಜಾನುವಾರುಗಳನ್ನು ತೆಗೆದುಕೊಂಡು ಬರಬಾರದು ಎಂದು ಹೇಳಿದ್ದಾರೆ.
ಭಕ್ತಾದಿಗಳು ಮನೆಯಲ್ಲಿಯೇ ಇದ್ದುಕೊಂಡು ಅಲ್ಲಿಯೇ ಪೂಜೆ ಮಾಡಿ ಶ್ರೀ ಗುರು ಫಕೀರೇಶ್ವರನ ಕೃಪೆಗೆ ಪಾತ್ರರಾಗಿ. ಮನೆಯಿಂದ ಮತ್ತು ಗ್ರಾಮದಿಂದ ಯಾರು ಹೊರಗಡೆ ಬರದೆ ಅಲ್ಲೇ ಸುರಕ್ಷಿತವಾಗಿ ಇರಬೇಕು ಎಂದು ತಿಳಿಸಿದ್ದಾರೆ.