ಶ್ರೀ ಗುರುಸ್ವಾಮಿಗಳವರ ಜನ್ಮ ವರ್ಧಂತಿ ಆಚರಣೆ

ಸಂಜೆವಾಣಿ ವಾರ್ತೆ
ಹನೂರು ಆ.2:- ತಾಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಹದೇಶ್ವರ ಬೆಟ್ಟದ ಸಾಲೂರು ಬೃಹ್ಮಠದ ಹಿರಿಯ ಸ್ವಾಮೀಜಿಗಳು ಶ್ರೀ ಗುರುಸ್ವಾಮಿಗಳವರ 67ನೇ ಜನ್ಮ ವರ್ಧಂತಿಯ ವಿಶೇಷವಾಗಿ ಗುರುಮಠದಲ್ಲಿ ಸರಳವಾಗಿ ಜನ್ಮದಿನಾಚರಣೆ ಮಾಡುವ ಮೂಲಕ ವೇದಾಗಮ ಪಾಠಶಾಲೆಯ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶಾಲೂರು ಮಠದ ಶ್ರೀ ಗುರುಸ್ವಾಮಿಗಳವರ ಜನ್ಮ ವರ್ಧಂತಿಯ ವಿಶೇಷವಾಗಿ ಶ್ರೀ ಕ್ಷೇತ್ರದ ಮಲೈ ಮಹದೇಶ್ವರ ಸ್ವಾಮಿಯು ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತಾ ಅಖಿಲ ಭಾರತ ವೀರಶೈವ ಮಹಾಸಭಾ ಹನೂರು ತಾಲೂಕು ಘಟಕದ ವತಿಯಿಂದ ಅಧ್ಯಕ್ಷರಾದ ಕೆ.ಎಂ ಬಸವರಾಜಪ್ಪ ಅವರು ಶುಭಾಶಯಗಳು ತಿಳಿಸಿದ್ದಾರೆ.
ಶ್ರೀ ಗುರು ಸ್ವಾಮಿಗಳವರ ಜನ್ಮ ವರ್ಧಂತಿಯ ದಿನದ ವಿಶೇಷವಾಗಿ ಬೆಂಗಳೂರು, ಕನಕಪುರ, ರಾಮನಗರ , ಮಳವಳ್ಳಿ ಇನ್ನು ಮುಂತಾದ ಎಲ್ಲಾ ಕಡೆಗಳಿಂದ ಮಹದೇಶ್ವರನ ಸ್ವಾಮಿಯ ಶಿಷ್ಯ ಪರಂಪರೆಯ ದೇವರ ಗುಡ್ಡಪ್ಪಂದಿರು ಎಲ್ಲಾರು ಸೇರಿ ಮಲೈ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಗುರು ಸ್ವಾಮಿ ಗಳವರ ಪಾದಪೂಜೆಯನ್ನು ಸಲ್ಲಿಸಿದ್ದಾರೆ.
ಸಾಲೂರು ಮಠಕ್ಕೆ ಆಗಮಿಸುವ ಸರ್ವ ಭಕ್ತರಿಗೂ ಹಾಗೂ ಮಠದ ಶಾಲೆಯ ಮಕ್ಕಳಿಗೆ ವಿಶೇಷ ಸಿಹಿ ಭೋಜನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿ ಶ್ರೀ ಗುರುಗಳ ಜನ್ಮ ವರ್ಧಂತಿಯನ್ನು ಸರಳವಾಗಿ ಆಚರಣೆ ಮಾಡಲಾಗಿದ್ದು ತಾಲೂಕಿನಾದ್ಯಂತ ಮಠಾಧೀಶರು ಸರ್ವಭಕ್ತರು ಶುಭಾಶಯಗಳನ್ನು ಕೋರಿದ್ದಾರೆ.