ಶ್ರೀ ಗುರುನಾನಕ ಮಹಾರಾಜರ್ ಜಯಂತಿ ಆಚರಣೆ

ಆಳಂದ:ನ.9: ಪಟ್ಟಣದಲ್ಲಿ ಸಿಂಧಿ ಸಮಾಜದ ಆಶ್ರಯದಲ್ಲಿ ಮುಖ್ಯರಸ್ತೆಯಲ್ಲಿನ ಮಹಾಲಕ್ಷ್ಮೀ ಕಲ್ಕೇಕ್ಸನ್ ಆಯೋಜಿಸಿದ್ದ ಧರ್ಮಗುರು ಶ್ರೀ ಗುರುನಾನಕ ಮಹಾರಾಜ್ ಅವರ 553ನೇ ಜಯಂತಿಯನ್ನು ಸಮಾಜ ಬಾಂಧವರು ಮತ್ತು ನಾಗರಿಕರು ಸೇರಿ ಆಚರಿಸಿದರು.

ಸಿಂಧಿ ಸಮಾಜದ ಹಿರಿಯ ಮುಖಂಡ ಜೋದಾರಾಮ ಅಡ್ವಾನಿ ಅವರು ಶ್ರೀಗುರು ನಾನಕ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಮಾಲೆ ಹಾಕಿದರು.

ಇದೇ ವೇಳೆ ಮಾತನಾಡಿದ ಅಡ್ವಾನಿ ಅವರು, ಗುರು ನಾನಕರು ಸರ್ವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮಡಿಪಾಗಿಟ್ಟು ಸಮಾಜಕ್ಕೆ ಸನ್ಮಾರ್ಗವನ್ನು ಬೋಧಿಸಿದ್ದಾರೆ ಅವರ ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗೋಣಾ ಎಂದು ಹೇಳಿದರು.

ದೇವಾನಂದ ಅಡ್ವಾನಿ, ಸಾಯಿಲ್ ಅಡ್ವಾನಿ, ಕಿಶೋರ ಕೇಶ್ವಾನಿ, ವಿಶಾಲ ಗಾಂಧಿ, ಮತ್ತು ಡಾ| ಕುನಾಲ ಜಿಡ್ಡಿಮನಿ ಸೇರಿದಂತೆ ಮತ್ತಿತರು ಈ ಸಂದರ್ಭದಲ್ಲಿ ಪುಸ್ಥಿತರಿದ್ದು ಗುರು ನಾನಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.