ಶ್ರೀ ಗಾಳೆಮ್ಮ ಜಾತ್ರಾ ಮಹೋತ್ಸವ 


ಸಂಜೆವಾಣಿ ವಾರ್ತೆ
ಕುಕನೂರು, ಮಾ.31:  ಸ್ಥಳೀಯ  ಬಿ.ಆರ್ ಅಂಬೇಡ್ಕರ್  ಕಾಲೋನಿಯ ಶ್ರೀ ಗಾಳೇಮ್ಮ ದೇವಿಯ ಜಾತ್ರಾ ಮಹೋತ್ಸವ  ಅತ್ಯಂತ ವಿಜ್ರಂಭಣೆಯಿಂದ ಬುಧವಾರ ಹಾಗೂ ಗುರುವಾರ ನೆರವೇರಿತು. ವಿಶೇಷವಾಗಿ  ಸುಮಾರು 70- 80 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ   ಕಾಯಿ ಪವಾಡ ಮತ್ತು ಅಗ್ನಿ ಪವಾಡ ನಡೆಯಿತು.
 ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ಕೊರೋನ ಮಧ್ಯೆ ಕೆಲವು ವರ್ಷ ಸ್ಥಗಿತಗೊಂಡಿತ್ತು.
 ಈ ವರ್ಷ ಅತ್ಯಂತ  ವಿಜ್ರಂಭಣೆಯಿಂದ  ಸಂಪ್ರದಾಯ ಬದ್ಧವಾಗಿ ಆಚರಿಸಲು ನಿರ್ಧರಿಸಿ ಯುಗಾದಿ ಅಮಾವಾಸ್ಯೆಯ  9 ದಿನಗಳ ತರುವಾಯ ರಾಮ ನವಮಿಯ ದಿವಸದಂದು ದೇವಿಯ ಮೂರ್ತಿ ಮೆರವಣಿಗೆ ಹಾಗೂ ಅಗ್ನಿ ಪವಾಡ ಮತ್ತು ಕಾಯಿ ಪವಾಡ ಸೇರದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 15 ದಿನಗಳ ಮುಂಚೆಯೇ ದೇವಿಯ ಮೂರ್ತಿ ಹಾಗೂ  ದಸಮಿ ಮತ್ತು ಪಾಲಿಕೆಯನ್ನು ಕಿನ್ನಾಳಕ್ಕೆ ಬಣ್ಣಕ್ಕೆ ಕಳಿಸಲಾಗುತ್ತದೆ. ಜಾತ್ರಾ ಸಂದರ್ಭದಲ್ಲಿ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಆದಿಶಕ್ತಿ ದುರ್ಗಮ್ಮ ದೇವಿಗೆ ಜಾತ್ರೆಗೆ ಬರುವಂತೆ ಸಮಾಜದ ಕಮಿಟಿಯವರು ಹೋಗಿ ವೀಳೆಯನ್ನು ಕೊಟ್ಟು ಬರುತ್ತಾರೆ,  ದೇವಿ ಬಣ್ಣಕ್ಕೆ ಹೋಗಿ ಬಂದ ನಂತರ ಹೊಳಗೆ ಹೋಗಿ ಗಂಗಾಪೂಜೆ ನೆರವೇರಿಸಿ ಮಡಿ ಮೈಲಿಗೆ ಮುಗಿಸಿ ದೇವಸ್ಥಾನದ ಆವರಣದಲ್ಲಿ ಕೂ ರಿಸಿ ವಿವಿಧ ಅಲಂಕಾರಗಳಿಂದ ಪೂಜೆ ಗೈಯುತ್ತಾರೆ
ಅದರಂತೆ ದಿ.29ನೇ ಬುಧವಾರದಂದು  ರಾತ್ರಿ ವೇಳೆ ಪ್ರತಿ ಮನೆಯಿಂದ  ಮಹಿಳೆಯರು ಮಕ್ಕಳು ಅಗ್ನಿಕುಂಡ ನಿರ್ಮಾಣ ಮಾಡಲು ಹೋಳಿಗೆಯನ್ನು ತಂದು ನೈವೇದ್ಯ ಮಾಡುವರು. ಡೊಳ್ಳು ಕುಣಿತದೊಂದಿಗೆ ದೇವಿಗೆ ವಿಶೇಷ ಪೂಜೆ ನೆರವೇರಿಸಿ ಅಗ್ನಿಕುಂಡ ನಿರ್ಮಾಣ ಮಾಡಿದರು, ಹಾಗೂ ತಿಮ್ಮಾಪುರದ ದುರ್ಗಮ್ಮ ದೇವಿಗೆ ಹಾಗೂ ಗಾಳೇಮ್ಮ ದೇವಿಗೆ ಹೂಮಾಲೆ ಹಾಕಿ ಅಲಂಕಾರ ನೆರವೇರಿಸಲಾಯಿತು.
ಬೆಳಿಗ್ಗೆ ಗುರುವಾರ 5.15 ಕ್ಕೆ ಪುನ: ದೇವಿಯನ್ನು ಹೊಳಗೆ ಹೋಗಿ ಗಂಗಾ ಪೂಜೆ ಮಾಡಲಾಯಿತು.8 ಗಂಟೆಗೆ ದೇವಸ್ಥಾನದ ಪೂಜಾರಿಗಳಿಂದ ಅಗ್ನಿ ಪ್ರವೇಶ ನಡೆಯಿತು. ಸಕಲ ಸದ್ಭಕ್ತಾದಿಗಳಿಗೆ ಅನ್ನಪ್ರಸಾದ ನೆರವೇರಿತು. ಸಾಯಂಕಾಲ 5:00 ಗಂಟೆಗೆ ದೇವಿಯ ಮೂರ್ತಿಯನ್ನು ವಿವಿಧ ಮಜಲುಗುಳೊಂದಿಗೆ ಡೊಳ್ಳು ಕುಣಿತದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ತಳಕಲ್, ತಿಮ್ಮಾಪುರ, ಕೊನಾಪೂರ್ ಗ್ರಾಮದ ಡೊಳ್ಳು ಕಲಾವಿದರ ಕಲಾ ಪ್ರಕಾರಕ್ಕೆ ಸಾರ್ವಜನಿಕರು ಫಿದಾ ಆದರು. ಗುರುವಾರ ಸಂಜೆ ವಿವಿಧ ಡೊಳ್ಳಿನ ಕಲಾವಿದರಿಂದ ಡೊಳ್ಳಿನ ಪದಗಳು ನೆರವೇರಿದವು. ಈ ಸಂದರ್ಭದಲ್ಲಿ 
ಮಲಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊರ್ಲೆಕೊಪ್ಪ, ಶಿವಪ್ಪ ಭಂಡಾರಿ, ಚಂದ್ರಪ್ಪ ಆರುಬೆರಳಿನ್ ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಅಂದಪ್ಪ ಭಂಡಾರಿ, ಪ್ರಶಾಂತ ಅರುಬೆರಳಿನ್, ಮಾರುತಿ ಭಂಡಾರಿ, ನಿಂಗರಾಜ್ ಅಣ್ಣಿಗೇರಿ, ಹನುಮಂತ ಅರುಬೆರಳಿನ್, ಗವಿಸಿದ್ದಪ್ಪ ಅಣ್ಣಿಗೇರಿ, ದೊಡ್ಡ ಈರಪ್ಪ ಅರುಬೆರಳಿನ್, ಯಮನೂರಪ್ಪ ಗುರ್ಲೆಕೊಪ್ಪ, ಬಸವರಾಜ್ ಬಾರಿಗಿಡದ, ರಮೇಶ್ ಅರಬೆರಳಿನ, ಪರಶುರಾಮ್ ಸಕ್ರಣ್ಣವರ್ ರಮೇಶ್ ಶಾಸ್ತ್ರಿ ಶೇಖರ್ ,ರಾಮು ಭಂಡಾರಿ  ಜಾತ್ರಾ ಸಮಿತಿಯ ನೇತೃತ್ವ ವಹಿಸಿದ್ದರು.

 ಹಿಂದೆ ನಮ್ಮ ಹಿರಿಯರು ಅತ್ಯಂತ ಸಂಪ್ರದಾಯ ಬದ್ಧವಾಗಿ ಶಕ್ತಿಶಾಲಿಯಾದ ಶ್ರೀ ಗಾಳೇಮ್ಮ ದೇವಿ ಜಾತ್ರಾ ಮಹೋತ್ಸವವನ್ನು  ವಿವಿಧ ಪವಾಡಗಳ ಮೂಲಕ  ನಡೆಸುತ್ತಿದ್ದರು. ಈಗ ನಾವು ಕೂಡ ಪ್ರತಿ ಮೂರು ವರ್ಷಕ್ಕೊಮ್ಮೆ ಸಮಾಜದ ಹಿರಿಯರು ಯುವಕರು ಎಲ್ಲರೂ ಸಹಬಾಳ್ವೆಯಿಂದ  ಸೇರಿಕೊಂಡು ದೇವಿಯ ಜಾತ್ರೆಯನ್ನು ಆಚರಿಸುತ್ತಿದ್ದೇವೆ.
 ಪ್ರಶಾಂತ್ ಆರುಬೆರಳಿನ್
 ಶ್ರೀ ಗಾಳೇಮ್ಮ ದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷರು

  ದುಷ್ಟ ಶಕ್ತಿಗಳನ್ನು ಸಂಹರಿಸುವ ಆದಿಶಕ್ತಿಯಾಗಿ ಇಷ್ಟಾರ್ಥಗಳನ್ನು ಬೇಡಿದ ವರಗಳನ್ನು ಭಕ್ತಿ ಪೂರ್ವಕವಾಗಿ ಬೇಡಿಕೊಂಡವರಿಗೆ ಒಲಿಯುವ ಗಾಳೇಮ್ಮ ದೇವಿ ಅತ್ಯಂತ ಶಕ್ತಿಶಾಲಿ
 ಗುರುರಾಜ ಗೋರ್ಲೆಕೊಪ್ಪ
 ಗಾಳೇಮ್ಮ ದೇವಿ ದೇವಸ್ಥಾನದ ಅರ್ಚಕ.