ಶ್ರೀ ಗಾಯತ್ರಿ ಉಪಾಸನೆ

ದಾವಣಗೆರೆ, ಸೆ.10; ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರ ನಗರದ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ಅನಂತ ಹುಣ್ಣಿಮೆಯ ಅಂಗವಾಗಿ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ ಉಪಾಸನೆ ಯಶಸ್ವಿಯಾಗಿ ನಡೆಯಿತು.ದಿ. ವೀರಭದ್ರರಾವ್ ಹೆಸರಿನಲ್ಲಿ ಅವರ ಸುಪುರ ವಾಸುದೇವ ಮತ್ತು ನಲ್ಲೂರು ಲಕ್ಷö್ಮಣರಾವ್‌ರವರ ಪೂಜಾ ಸೇವೆಯ ಈ ಸಂದರ್ಭದಲ್ಲಿ ಶ್ರೀ ಗಾಯತ್ರಿ ಪರಿವಾರ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ, ನಿಕಟಪೂರ್ವ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ಸಂಚಾಲಕರಾದ ಭಾವನ್ನಾರಾಯಣ, ಸಮಿತಿಯ ಸದಸ್ಯರಾದ ಬಿ.ಸತ್ಯನಾರಾ ಯಣ, ಸತೀಶ್ ಆರ್.ಎಂ., ವಿ.ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.