ಶ್ರೀ ಗಣೇಶ್ ಪಬ್ಲಿಕ್ ಸ್ಕೂಲ 10ನೇ ವರ್ಷದ ವಾರ್ಷಿಕೋತ್ಸವ & ಸ್ನೇಹ ಸಮ್ಮೇಳನ

(ಸಂಜೆವಾಣಿ ವಾರ್ತೆ)
ಹುಣಸಗಿ ; ಮಾ.5:ಸಮೀಪದ ರಾಜನಕೋಳೂರ ತಾಂಡಾ ಕ್ರಾಸ್ ಹತ್ತಿರದ ಶ್ರೀ ಗಣೇಶ್ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10- ನೇ ವರ್ಷದ ವಾರ್ಷಿಕೋತ್ಸವ & ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದ ಕೊಡೇಕಲ್ ದುರುಂಡೇಶ್ವರ್ ವೀರಕ್ತಮಠದ ಶಿವುಕುಮಾರ ಸ್ವಾಮೀಜಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಬಾಂಧವ್ಯ ಕಡಿಮೆಯಾಗುತ್ತಿರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಅತಿಥಿಗಳಾಗಿ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರಾದ ಬಾಷುನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ವಠಾರ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರುಗಳಾದ ಸೋಮನಗೌಡ ಗುಳಬಾಳ, ಶರಣಯ್ಯ ಮುತ್ತ್ಯಾ ಬ್ಯಾಳಿ, ನಾಗಯ್ಯಸ್ವಾಮೀ ರಾಜನಕೋಳೂರು, ನಾನಪ್ಪ ಪೂಜಾರಿ ಸೇರಿದೆಂತೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಇದ್ದರು. ವರದಿ ವಾಚನವನ್ನು ಸವಿತಾ ಜಾಧವ, ಪ್ರಾರ್ಥನೆ ಸುಜಾತ & ಗುರುದೇವಿ ಪ್ರಾಸ್ತವಿಕ, ಬಿ ಎಲ್ ನಾಯಕ್, ಸ್ವಾಗತ ಗಣೇಶ್ ಚವಾಣ್, ನಿರೂಪಣೆ ಗೀತಾ ಬಿ ನಾಯಕ್, ವಂದನಾರ್ಪಣೆ ಪರಶುರಾಮ ರಾಠೋಡ, ನೆರವೇರಿಸಿದರು.