ಶ್ರೀ ಗಂಡಿ ನರಸಿಂಹಸ್ವಾಮಿ ರಥೋತ್ಸವ


ಸಂಜೆವಾಣಿ ವಾರ್ತೆ
ಸಂಡೂರು: ಮಾ:27  ಐತಿಹಾಸಿಕ ಶ್ರೀ ಗಂಡಿ ನರಸಿಂಹಸ್ವಾಮಿ ರಥೋತ್ಸವವು ಬಹು ಅದ್ದೂರಿಯಾಗಿ ತಾಲೂಕಿನ ಧರ್ಮಾಪುರ ಗ್ರಾಮದ ಹೊರ ವಲಯದ ಗಂಡಿಯಲ್ಲಿ ನೆರವೇರಿತು.
ರಥೋತ್ಸವವಕ್ಕೂ ಪೂರ್ವದಲ್ಲಿ ತನ್ನದೇ ಅದ ಸಂಪ್ರದಾಯಗಳನ್ನು ಹೊಂದಿರುವ ಗಂಡಿ ನರಸಿಂಹಸ್ವಾಮಿ ಜಾತ್ರೆಯು ಮುಖ್ಯವಾಗಿ ಪಲ್ಲಕ್ಕಿ ಉತ್ಸವಗಳು ಅದ್ದೂರಿಯಾಗಿ ನಡೆದವು, ಜಾತ್ರೆಯ ದಿನದಂದು ಸ್ವಾಮಿಯ ವಿಶೇಷ ಅಭಿಷೇಕ, ಪೂಜೆ ಮಾಡುವ ಮೂಲಕ ಉತ್ಸವವು ಪ್ರಾರಂಭವಾಯಿತು, ಬೆಳಗಿನಿಂದಲೇ ಭಕ್ತರು ಅಗಮಿಸಿ ಬಿಡಾರಗಳನ್ನು ಹಾಕಿಕೊಂಡು ಪೂಜಾಕಾರ್ಯಗಳನ್ನು ಪ್ರಾರಂಭಿಸುತ್ತಾರೆ, ಬೆಳಿಗ್ಗೆ ಮುಂಜಾನ ವಿಶೇಷ ಪೂಜೆಯ ನಂತರ ಪಲ್ಲಕ್ಕಿ ಉತ್ಸವವ ನಡೆಸುತ್ತಾರೆ, ಸಂಜೆಯಾಗುತ್ತಿದ್ದಂತೆ ಬೇಟೆ ಮರದ ಉತ್ಸವ ನಡೆಯುತ್ತದೆ. ಸ್ವಾಮಿಯ ಪೂಜೆ ಮಾಡುವ ಪೂಜಾರಿಯೂ ಉಪವಾಸ ವೃತದಿಂದ ಇರುತ್ತಾರೆ, ಸಂಜೆಯ ಸಮಯಕ್ಕೆ ಗಂಡಿಯಲ್ಲಿ ನಿಗದಿ ಪಡಿಸಿದ ಸ್ಥಳಕ್ಕೆ ಸಾಗಿ ಇಡೀ ಮರಕ್ಕೆ ವಿಶೇಷವಾದ ಪೂಜೆಯನ್ನು ನೆರವೇರಿಸಿ ಪೂಜಾರಿಯೂ ಸಾಹಸ ಭರಿತರಾಗಿ ಇಡೀ ಮರವನ್ನು ಭಕ್ತ ಸಮೂಹಕ ಕಿತ್ತು ಅದರ ಮೇಲೆಯೇ ಪೂಜಾರಿಯನ್ನು ಮಲಗಿಸಿಕೊಂಡು ದೇವಸ್ಥಾನಕ್ಕೆ ತರುತ್ತಾರೆ, ನಂತರ ಅ ಮರದ ಪತ್ರೆಯಿಂದ ಸ್ವಾಮಿಗೆ ಪೂಜೆ ಮತ್ತು ಅರ್ಪಣೆ ನಡೆಯುತ್ತದೆ, ನಂತರ ಪಲ್ಲಕ್ಕಿಯಲ್ಲಿ ನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬೆಟ್ಟದ ಮೇಲಿಂದ ಕೆಳಕ್ಕೆ ಬರುತ್ತಾರೆ, ಅಗ ವಾದ್ಯಗಳ ವಾದನ, ಈ ಸಂದರ್ಭದಲ್ಲಿ ರಾಜವಂಶಸ್ಥರಾದ ಸೂರ್ಯಪ್ರಭ ಅಜಯ್ ಘೋರ್ಪಡೆ, ಬಹಿರ್ಜಿ ಅಜಯ್ ಘೋರ್ಪಡೆ, ವೈಷ್ಣವಿ ಬಹಿರ್ಜಿ ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ ಮತ್ತು ಧನಶ್ರೀ ಯೊಗೇಂದ್ರ ಸಾವಂತ್‍ರವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.  ನಂತರ ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ಅಲ್ಲಿಯೂ ಪೂಜೆ ಸಲ್ಲಿಸುವ ಮೂಲಕ ಉಪವಾಸ ವ್ರತದಿಂದ ಇದ್ದ ಪೂಜಾರಿಯೊಂದಿಗೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.  6.30ರ ಸುಮಾರಿಗೆ ರಥೋತ್ಸವ ಪ್ರಾರಂಭವಾಗಿ ಪಾದಗಟ್ಟೆಯವರೆಗೆ ಸಾಗಿ ಹಿಂತಿರುಗಿತ, ಈ ಸಂದರ್ಭದಲ್ಲಿ ಸೇರಿದ್ದ ಸಾವಿರಾರು ಭಕ್ತರು ಬಾಳೆ ಹಣ್ಣನು ಎಸದು ತಮ್ಮ ಭಕ್ತಿಯನ್ನು ಸಮರ್ಪಿಸಿದರೆ, ಕೆಲವು ಹೂವಿನ ಹಾರಗಳನ್ನು ಹಾಕಿ ಸಮರ್ಪಿಸಿದರು, ಮತ್ತೆ ಕೆಲವರು ರಥದ ಗಾಲಿಗೆ ತೆಂಗಿನ ಕಾಯಿಗಳನ್ನು ಹೊಡೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಹೀಗೆ ರಥೋತ್ಸವವು ಬಹು ಅದ್ದೂರಿಯಾಗಿ ನಡೆಯಿತು. ಇದಕ್ಕೆ ಸುತ್ತಲಿನ ಗ್ರಾಮಗಳಾದ ಯಶವಂತನಗರ, ಸೋಮಲಾಪುರ, ಧರ್ಮಾಪುರ, ಸಂಡೂರು, ಲಕ್ಷ್ಮೀಪುರ, ಭುಜಂಗನಗರ ಹಾಗೂ ಇತರ ಗ್ರಾಮಗಳ ಭಕ್ತರು ಅಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.