ಶ್ರೀ ಖಾಸ್ಗತ ರಥದ ಕಳಸ ಇಳಿಸುವ ಕಾರ್ಯಕ್ರಮ

ತಾಳಿಕೋಟೆ:ಜು.4: ಪಟ್ಟಣದಲ್ಲಿ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ನಿಮಿತ್ಯ ಜರುಗಿದ ಮಹಾ ರಥೋತ್ಸವದ ಕಳಸ ಇಳಿಸುವ ಕಾರ್ಯಕ್ರಮವು ಸೋಮವಾರರಂದು ಗುರು ಪೂರ್ಣಿಮೆ ದಿನದಂದು ಸಾಯಂಕಾಲ ಭಕ್ತಿಭಾವದಿಂದ ಸಖಲ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.

ಕಳಸ ಇಳಿಸುವ ಕಾರ್ಯಕ್ರಮದ ನಂತರ ಶ್ರೀ ಖಾಸ್ಗತೇಶ್ವರ ಕತೃ ಗದ್ದುಗೆಗೆ ಆಗಮಿಸಿದ ಭಕ್ತ ಸಮೂಹ ಮಹಾ ಪೂಜೆ ಸಲ್ಲಿಸಿದರಲ್ಲದೇ ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಪಟ್ಟಣದ ಶ್ರೀ ಮಂತ ಮನೆತನದ ಸಜ್ಜನ ಪರಪ್ಪನವರ ಮನೆಯಿಂದ ತಂದ ಆರತಿಯನ್ನು ಪುನಃ ಅವರ ಮನೆಗೆ ಮುಟ್ಟಿಸಿ ಜಾತ್ರೋತ್ಸವ ಕಾರ್ಯಕ್ರಮವನ್ನು ಮಂಗಲಗೊಳಿಸಲಾಯಿತು.

ಜೂನ 23 ರಿಂದ ಪ್ರಾರಂಭಗೊಂಡಿದ್ದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವವನ್ನು ರಥದ ಕಳಸ ಇಳಿಸುವ ಮೂಲಕ ಮಂಗಲಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಶ್ರೀ ಮಠದ ಉಸ್ತುವಾರಿ ವೇ|| ಮುರುಘೇಶ ವಿರಕ್ತಮಠ, ವಿಶ್ವನಾಥ ವಿರಕ್ತಮಠ, ಸಂಗಯ್ಯ ವಿರಕ್ತಮಠ, ಶರಬಯ್ಯ ಪುರಾಣಿಕಮಠ, ನಿಂಗಯ್ಯ ಮಾನವಿಮಠ, ಸಂಗಯ್ಯ ದುರ್ಗದಮಠ, ಗುರಲಿಂಗಪ್ಪ ಸಜ್ಜನ, ರಮೇಶ ಸಾಲಂಕಿ, ಶಾಂತಗೌಡ ಬಿರಾದಾರ, ಸುಭಾಸ ಅಗರವಾಲಾ, ಮಲ್ಲು ಗೋಗಿ, ಪ್ರಕಾಶ ನಿಡಗುಂದಿ, ಗಂಗಾರಾಮ ಮಹೇಂದ್ರಕರ, ವಿಶ್ವನಾಥ ಬಡದಾಳೆ, ರಾಜೇಶ ಮಹಾಜನ್, ಅನೀಲ ಮಹೇಂದ್ರಕರ, ಅವರನ್ನೊಳಗೊಂಡು ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾದರು.