ಶ್ರೀ ಖಾಸ್ಗತರ ಭಕ್ತರ ಭಕ್ತಿಗೆ ಅಂತ್ಯವೇ ಇಲ್ಲ:ಸಿದ್ದಲಿಂಗಶ್ರೀ

ತಾಳಿಕೋಟೆ:ನ.23: ಜಗತ್ತಿನೊಳಗೆ ಶ್ರೇಷ್ಠ ಸಂತರನ್ನು ಪಡೆಯಬೇಕಾದರೆ ಶ್ರೀ ಖಾಸ್ಗತರ ಭಕ್ತರಂತಹ ಭಕ್ತರನ್ನು ಪಡೆಯಬೇಕೆಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಮಂಗಳವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಇತ್ತಿಚಗೆ ರಾಜವಾಡೆಯಲ್ಲಿ ಜರುಗಿದ ಅಜ್ಜನ ಉತ್ಸವ ಕಾರ್ಯಕ್ರಮದ ನಿನ್ನ ನೀ ತಿಳಿದುಕೋ ಎಂಬ ಪ್ರವಚನ ಮಹಾ ಮಂಗಲೋತ್ಸವ ನಂತರ ಶ್ರೀ ಮಠದಲ್ಲಿ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ರಾಜವಾಡೆಯ ಸಮಸ್ತ ಭಕ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಶ್ರೀಗಳು ನಾವು ಚಲಿಸುವ ಟ್ರೇನಿನಲ್ಲಿ ಭೋಗಿಯಂತೆ ಇದ್ದಂತೆ ಆದರೆ ಭಕ್ತರು ಇಂಜನ್ ಇದ್ದಂತೆ ಈ ಭೋಗಿಗಳನ್ನು ಎಳೆದುಕೊಂಡು ಹೋಗುವ ಭಕ್ತಿಭಾವದ ಭಕ್ತರಾದ ತಮ್ಮೇಲ್ಲರನ್ನು ಎಷ್ಟು ಹೊಗಳಿದರೂ ಸಾಲದೆಂದರು. ಭಕ್ತಿ, ಪ್ರೀತಿ, ನಿಷ್ಠೆ, ವಿಸ್ವಾಸ, ಒಗ್ಗಟ್ಟುತನವೆಂಬುದು ಹೀಗೆ ಇರಲೆಂದು ಉಪಸ್ಥಿತ ಭಕ್ತರಿಗೆ ಆಶಿರ್ವದಿಸಿದ ಶ್ರೀಗಳು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿ ಯಶಸ್ವಿ ಕಾಣಲು ಭಕ್ತರ ಭಕ್ತಿಯೇ ಕಾರಣವಾಗಿತ್ತೆಂದರು. ಏನೇ ಮಾಡಿದರೂ ಶ್ರೀ ಖಾಸ್ಗತರ ಭಕ್ತರ ಭಕ್ತಿಗೆ ಅಂತ್ಯವೇ ಇಲ್ಲಾ 5 ದಿನಗಳವರೆಗೆ ಜರುಗಿದ ಕಾರ್ಯಕ್ರಮದಲ್ಲಿ ಯಾವುದೇ ತೊಂದರೆಯಾಗಲಿಲ್ಲಾ ಆ ಕಾರ್ಯಕ್ರಮದಲ್ಲಿ ಓಡಾಡಿದ ಎಲ್ಲ ಭಕ್ತಿಯ ಕೈಗಳಿಂದ ಮಾಡಿದ ಪ್ರಸಾದ ಪ್ರಸಾದವಾಗಿಯೇ ಮಾರ್ಪಟ್ಟಿತ್ತೆಂದರು.

ಯಾವರೀತಿ ಬಳ್ಳಿಗೆ ಬೆಳೆಯಲು ಕಟಗಿಯ ಅವಶಕತೆ ಇದ್ದಂತೆ ಎಲ್ಲ ಭಕ್ತರು ಶ್ರೀ ಖಾಸ್ಗತನ ಕೃಪೆ ಪಡೆಯಲು ಕಟ್ಟಿಗೆಯಾಗಿಯೇ ನಿಂತಿದ್ದೀರಿ ಮುಂದೊಂದು ದಿನ ಖಾಸ್ಗತ ಮಠದ ಭಕ್ತಿಯ ಈ ಕಾರ್ಯಕ್ರಮ ಯಾವ ರೀತಿಯಾಗುತ್ತದೆ ಎಂಬುದು ಜರುಗುತ್ತದೆ ಎಂಬುದನ್ನು ನೋಡಲು ಅನ್ಯ ಪಟ್ಟಣ, ನಗರ, ಗ್ರಾಮಾಂತರಗಳಿಂದ ಕಾರ್ಯಕ್ರವನ್ನು ನೋಡಲು ಆಗಮಿಸುವ ದಿನಗಳು ದೂರವಿಲ್ಲವೆಂದರು. 5 ದಿನಗಳ ಕಾರ್ಯಕ್ರಮ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದನ್ನು ನೋಡಿದ ನಿಡಸೋಸಿ ಜಗದ್ಗುರುಗಳು ನೋಡಿ ದೂರವಾಣಿ ಮುಖಾಂತರ ಮಾತನಾಡಿ ಆನಂದ ಭರೀತವಾದ ಸುದ್ದಿ ಕೇಳಿ ನನಗೆ ಸಂತಸ ತಂದಿತು ಭಕ್ತರು ಬಧುಕುವದಾದರೆ ಆರೋಗ್ಯದಿಂದ ಬಾಳಿ ಬಧುಕಿ ಎಲ್ಲರೂ ಬಿಳಿಯ ಹಾಳಿಯಂತೆ ಇದ್ದೀರಿ ಇಂತಹ ಬಿಳಿ ಹಾಳಿಯಲ್ಲಿ ಮಸಿ ಚೆಲ್ಲುವವರು ಬಂದರೂ ಅದಲ್ಲಿ ಮಸಿ ಬಿಳ್ಳದಂತೆ ಏಚ್ಚರವಹಿಸಿಕೊಂಡು ಹೋಗಿರಿ ಎಂದು ಭಕ್ತರಿಗೆ ಆಶಿರ್ವದಿಸಿ ಮಹಾ ಪ್ರಸಾದ ನೀಡಿದರು.

ಇನ್ನೋರ್ವ ರಾಜವಾಡೆಯ ಗಂಗಾರಾಮ ಘೋರ್ಪಡೆ ಅವರು ಮಾತನಾಡಿ ಶ್ರೀ ಖಾಸ್ಗತೇಶ್ವರ ಮಠದ ಮೇಲೆ ಕಳೆದ, ತಲೆಮಾರಿನಿಂದಲೂ ಹಿರಿಯರು ಶ್ರೀ ಖಾಸ್ಗತನ ಶ್ರೀ ಮಠದ ಮೇಲೆ ಭಕ್ತಿಭಾವ ತೋರಿಸುತ್ತಾ ಬಂದವರಾಗಿದ್ದಾರೆ ಅದೇ ಭಕ್ತಿಯನ್ನೇ ಇಂದಿನ ಫಿಳಿಗೆಯಾದ ನಾವೇಲ್ಲರೂ ಮುಂದುವರೆಸಿಕೊಂಡು ಸಾಗಿದ್ದೇವೆ ರಾಜವಾಡೆ ಎನ್ನುವಂತಹದ್ದು ಇದು ಯುದ್ದ ಭೂಮಿಯಾಗಿದ್ದು ಇದರಲ್ಲಿ ಜನ್ಮ ತಾಳಿದ ನಾವೇಲ್ಲರೂ ಆಧ್ಯಾತ್ಮೀಕ ಸೇವೆಗೂ ಕೂಡಾ ಮುಂದುವರೆಯುತ್ತಾ ಶ್ರೀ ಮಠದ ಸೇವೆಯನ್ನು ಯಾವುದೇ ಬೇದಭಾವವಿಲ್ಲದೇ ಹಿಂದಿನ ಹಿರಿಯರ ಮಾರ್ಗದರ್ಶನದಂತೆ ನಾವು ಕೂಡಾ ಎಲ್ಲರು ಮಾಡುತ್ತಾ ಸಾಗುತ್ತೇವೆಂದು ಶ್ರೀಗಳಿಗೆ ಬರವಸೆ ನೀಡಿದರು.

ಇನ್ನೋರ್ವ ರಾಜವಾಡೆಯ ಕುಮಾರಗೌಡ ಪಾಟೀಲ ಅವರು ಮಾತನಾಡಿ ರಾಜವಾಡೆಯ ಹಾಗೂ ಶ್ರೀ ಖಾಸ್ಗತೇಶ್ವರ ಮಠಕ್ಕೆ ಇದ್ದ ಸಂಬಂದ ಈ ಹಿಂದಿನಿಂದಲೂ ಸಾಗಿಬಂದಿದೆ ಶ್ರೀಮಠದ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಾ ಸಾಗಿದ್ದೇವೆ ನಮ್ಮೇಲ್ಲರ ಮೇಲೆಯೂ ಶ್ರೀಗಳ ಕೃಪಾಶಿರ್ವಾದ ಇತ್ತು ಆದರೂ ತಾವು ಕೂಡಾ ನಮ್ಮ ಮೇಲೆ ಇಟ್ಟ ಪ್ರೀತಿ, ವಿಸ್ವಾಸವನ್ನು ಅರೀತ ನಾವೇಲ್ಲರೂ ಶ್ರೀಮಠದ ಯಾವುದೇ ಕಾರ್ಯಕಲಾಪಗಳಿದ್ದರೂ ನಾವೇಲ್ಲರೂ ಪಾಲ್ಗೊಂಡು ಯಶಸ್ವಿಗೆ ಶ್ರಮಿಸುತ್ತೇವೆಂದರು.

ಇದೇ ಸಮಯದಲ್ಲಿ ರಾಜವಾಡೆಯ ಎಲ್ಲ ಯುವಕರ ಬಳಗದ ವತಿಯಿಂದ ಶ್ರೀ ಸಿದ್ದಲಿಂಗ ದೇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ರಾಜವಾಡೆಯ ಹಿರಿಯರು, ಯುವಕರು, ಹಾಗೂ ಶ್ರೀಮಠದ ಭಕ್ತವೃಂದದವರು ಪಾಲ್ಗೊಂಡು ಶ್ರೀಗಳ ಆಶಿರ್ವಾದ ಪಡೆದು ಪುನಿತರಾದರು.