ಶ್ರೀ ಖಾಸ್ಗತರ ತಪಶಕ್ತಿ ಸಿದ್ದಲಿಂಗ ದೇವರಲ್ಲಿದೆ:ಪ್ರಭುಕುಮಾರಶ್ರೀ

ತಾಳಿಕೋಟೆ:ನ.18: ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಮೂರ್ತಿ ಚಿಕ್ಕದಾದರೂ ಕಿರ್ತಿದೊಡ್ಡದೆಂಬಂತೆ ಶ್ರೀಮಠದ ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಸಾಗಿದ್ದಲ್ಲದೇ ಸಮಸ್ತರ ಭಕ್ತರ ಒಲುಮೆಯನ್ನು ಶ್ರೀ ಖಾಸ್ಗತರಂತೆ ಪಡೆದುಕೊಂಡು ನಡೆದಿದ್ದನ್ನು ನೋಡಿದರೆ ರಾಜ್ಯದಲ್ಲಿ ಅಷ್ಟೇ ಅಲ್ಲಾ ದೇಶದಲ್ಲಿ ಮಹಾಸ್ವಾಮಿಗಳಾಗಿ ಪ್ರಜ್ವಲಿಸಲಿದ್ದಾರೆಂದು ಮಸೂತಿಯ ಜಗದೀಶ್ವರ ಹಿರೇಮಠದ ಮ.ಘ.ಚ.ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಗುರುವಾರರಂದು ಶ್ರೀ ಖಾಸ್ಗತ ಶಿವಯೋಗಿ ಹಾಗೂ ವಿರಕ್ತಶ್ರೀಗಳವರ ಹಾಗೂ ಶ್ರೀ ಮಠದ ಈ ಹಿಂದಿನ ಎಲ್ಲ ಅಜ್ಜಂದಿರ ಕುರಿತು ರಾಜವಾಡೆಯಲ್ಲಿ ಭಕ್ತನ ವೇದಿಕೆಯಲ್ಲಿ ಏರ್ಪಡಿಸಲಾದ ಅಜ್ಜನ ಉತ್ಸವ 2ನೇ ದಿನದ ಕಾರ್ಯಕ್ರಮದಲ್ಲಿ “ನಿನ್ನ ನೀ ತಿಳಿದುಕೋ” ಎಂಬ ವಿಷಯ ಕುರಿತು ನೆರೆದ ಭಕ್ತ ಸಮೂಹಕ್ಕೆ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಪ್ರತಿಯೊಬ್ಬ ಭಕ್ತನು ಬಾಳಿ ಬೆಳಗಲಿ ಎಂಬ ಉದ್ದೇಶದಿಂದ ವಿವಿಧ ಮಠಾಧೀಶರಿಂದ ಗುರುವಿನ ಮಾರ್ಗದರ್ಶನವನ್ನು ಹಮ್ಮಿಕೊಂಡಿದ್ದಾರೆ ಅವರ ಮೇಲೆ ತಾಳಿಕೋಟೆ ಭಕ್ತರು ಇಟ್ಟ ಪ್ರೀತಿ ಅಪಾರವಾಗಿದ್ದು ಸಿದ್ದಲಿಂಗದೇವರು ಶ್ರೀ ಖಾಸ್ಗತರಂತೆ ಹೆಸರು ಪಡೆಯಲಿದ್ದಾರೆಂದರು.

ಇನ್ನೋರ್ವ ಸಾನಿದ್ಯ ವಹಿಸಿದ ಕಮತಗಿಯ ಶ್ರೀಮನಿಪ್ರ ಹುಚ್ಚೇಶ್ವರ ಮಹಾಸ್ವಾಮಿಗಳು ಮಾತನಾಡಿ ಸ್ವಾಮಿ ಅನ್ನುವಂತಹ ಶಬ್ದಕ್ಕೆ ಅರ್ಥವಿದೆ ಅವನ್ನೊಬ್ಬ ನಿಜವಾದ ಸಮಾಜ ಸೇವಕ ಭಕ್ತೋದ್ದಾರ ಗೈಯುವವನೇ ಸ್ವಾಮಿಯಾಗಿರುತ್ತಾನೆಂದರು. ಭಕ್ತರ ಮಿಡಿತ ಸಿದ್ದಲಿಂಗಶ್ರೀಗಳಿಗೆ ಗೊತ್ತಿದೆ ಧಾರ್ಮಿಕ ಕಾರ್ಯಕ್ರಮದ ವ್ಯವಸ್ಥೆನೆ ನಿನ್ನ ನೀ ತಿಳಿದುಕೋ ಅನ್ನುವಂತಹ ತಾಯ ಗರ್ಭದಿಂದ ಹೊರಬಂದ ಬಳಿಕ ನಿನ್ಯಾರು ಎಂಬುದನ್ನು ಭಗವಂತ ಹೇಳಿರುತ್ತಾನೆ ಸುಮ್ಮನೆ ಹೋಗಬೇಡಾ ನಿನ್ನ ನೀ ತಿಳಿದು ಕೋ ಎಂದು ಜೀವ ಪುಣ್ಯದ ಕೆಲಸ ಕಾರ್ಯಕ್ಕಾಗಿ ಬಂದಿರತಕ್ಕಂತ ಈ ಜನ್ಮವಾಗಿದೆ 84 ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮದಲ್ಲಿ ಸತ್ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದರು.

ಪುರಾಣ ಪ್ರವಚನಕಾರರಾದ ಮಸೂತಿಯ ಡಾ.ಸಿದ್ದಲಿಂಗಯ್ಯ ಶಾಸ್ತ್ರೀಗಳು ಮನುಷ್ಯ ಜನ್ಮ ಲಾಭ ಮುಕ್ತಿಯನ್ನು ಪಡೆಯುವ ಬಗ್ಗೆ ಕುರಿತು ತಿಳಿಹೇಳಿ ನಿನ್ನ ನೀ ತಿಳಿದು ಕೋ ಎಂಬುದರ ಬಗ್ಗೆ ಬಹುಮಾರ್ಮಿಕವಾಗಿ ವಿವರಿಸಿದರು.

ಶ್ರೀ ಖಾಸ್ಗತೇಶ್ವರ ಮಠದ ಬಾಲ ಶೀವಯೋಗಿ ಸಿದ್ದಲಿಂಗ ದೇವರು ಮಾತನಾಡಿ ನಿಜವಾದ ಆಸ್ತಿ ಬಂಗಾರ ಬೆಳ್ಳಿ ಗಳಿಕೆಗೆ ಅನ್ನುವದಿಲ್ಲ ನಿಜವಾದ ಆಸ್ತಿ ಎಂದರೆ ಯಾವುದರಿಂದ ಬಧುಕಲು ಆಗುವದಿಲ್ಲಾ ಅದಕ್ಕೆ ಅನ್ನುತ್ತಾರೆಂದರು. ದೇವನ ಕೆಲಸ ಎಲ್ಲರಿಗೂ ಉಚಿತಮಾಡಿಕೊಡುವದು ಸಾವಿರಾರು ವರ್ಷಗಳಿಂದ ಸೂರ್ಯ ಬೆಳಕು ಕೊಟ್ಟಿದ್ದಾನೆ ಅವನಿಗೆ ಕೃತಜ್ಞ ಸಲ್ಲಿಸಬೇಕೆಂದರು.

ಅತಿಥಿ ಸಿಎನ್‍ಆರ್ ರಾವ್ ಪ್ರಶಸ್ತಿ ವಿಜೇತ ಶಿಕ್ಷಕ ವಿಧ್ಯಾದರ ಯಾತಗಿರಿ ಅವರಿಗೆ ವಿಜಯಪುರ ಶ್ರೀಮಾತಾ ಆಯ್‍ಎಎಸ್ ಅಕಾಡೆಮಿಯ ಪ್ರಭುಗೌಡ ಬೋನಾಳ ಅವರಿಗೆ ಹಾಗೂ ಹುಣಸಗಿಯ ಸ್ಪೂರ್ತಿ ಗ್ರೂಫ್‍ನ ನಾನಾಗೌಡ ಪಾಟೀಲ ಅವರಿಗೆ ಉಭಯ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂಗೀತಗಾರರಾದ ದೇವರಾಜ ಯರಕಿಹಾಳ, ಸುರೇಶ ಹೂಗಾರ ಅವರು ಸಂಗೀತ ಸೇವೆ ಸಲ್ಲಿಸಿದರು.