ಶ್ರೀ.ಕ್ಷೇ.ಧ.ಗ್ರಾ.ಯೋ ವತಿಯಿಂದ ಉಚಿತ ಮಧ್ಯವರ್ಜನ ಶಿಬಿರ

ಕೆ.ಆರ್.ಪೇಟೆ:ಮಾ:28: ಪಾನಮುಕ್ತರಾಗಿ ಸುಂದರ ಬದುಕು ನಡೆಸಲು ನಿರ್ಧರಿಸಿರುವ ನಿಮ್ಮೆಲ್ಲರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜು ನಾಥ ಸ್ವಾಮಿಯ ಆಶಿರ್ವಾದ ಸದಾ ಇರುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೆಶಕ ಸದಾನಂದ ತಿಳಿಸಿದರು.
ಅವರು ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹೆತ್ತಗೋನಹಳ್ಳಿ ಗ್ರಾಮದ ಲಕ್ಷ್ಮಿದೇವಿಮಾಯಮ್ಮ ದೇವಸ್ಥಾನದ ಬಳಿ ಮಧ್ಯವರ್ಜನ ಶಿಬಿರದಲ್ಲಿ ಮಧ್ಯ ತ್ಯಜಿಸಿ ಪಾನಮುಕ್ತರಾದ ಹಲವಾರು ವ್ಯಕ್ತಿಗಳಿಗೆ ನವಜೀವನ ಸಮಿತಿಯ ವತಿಯಿಂದ ಶುಭಹಾರೈಸಿ ಮಾತನಾಡಿದರು.
ನಮ್ಮ ಸಂಸ್ಥೆಯ ವತಿಯಿಂದ ವರ್ಷದಲ್ಲಿ 2-3 ಸಲ ಮಧ್ಯವರ್ಜನ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು ಗ್ರಾಮೀಣ ಪ್ರದೇಶದ ನೂರಾರು ಸಂಖ್ಯೆಯ ಜನರಿಗೆ ಉಚಿತವಾಗಿ ಮಧ್ಯದಿಂದಾಗುವ ಅನಾಹುತಗಳ ಬಗ್ಗೆ ಈ ಶಿಬಿರದಲ್ಲಿ ಮನವರಿಕೆ ಮಾಡಲಾಗಿದ್ದು ಇದರಲ್ಲಿ ಪಾಲ್ಗೊಂಡ ಸಾಕಷ್ಟು ಮಂದಿ ಪಾನಮುಕ್ತರಾಗಿ ಬದುಕು ಸಾಗಿಸುತ್ತಿದ್ದಾರೆ. ಅಂಥಹವರಿಗೆ ಸಂಸ್ಥೆಯ ವತಿಯಿಂದ ಶುಭಹಾರೈಕೆ ಹಾಗೂ ಅವರ ಆರ್ಥಿಕ ಜೀವನೋಪಾಯಕ್ಕಾಗಿ ಸಹಾಯ ನೀಡಲಾಗುತ್ತಿದ್ದು ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ನವಜೀವನ ಸಮಿತಿಯ ಸದಸ್ಯರಾದ ಹರೀಶ್, ವೆಂಕಟೇಶ್, ಮತ್ತು ಸೇವಾ ಪ್ರತಿನಿಧಿಗಳು ಹಾಜರಿದ್ದರು.