ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರಿಗೆ ಸಹಕಾರಿ


ಸಂಜೆವಾಣಿ ವಾರ್ತೆ
ಕುರುಗೋಡು: ಮೇ18: ಪಟ್ಟಣ ಸಮೀಪದ ಗೆಣಿಕೆಹಾಳು ಗ್ರಾಮದ ತಾಯಮ್ಮ ದೇವಿ ದೇವಸ್ಥಾನ ಮತ್ತು ಪಟ್ಟಣಸೆರಗು ಗ್ರಾಮದ ಅಂಬಾದೇವಿ ಮತ್ತು ಸದ್ಗುರು ಮಾನಪ್ಪ ತಾತ ದೇವಸ್ಥಾನ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕ್ರಮವಾಗಿ 50 ಸಾವಿರ ಮತ್ತು 1.50 ಲಕ್ಷ ಡಿಡಿಯನ್ನು ವಿತರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯನಗರದ ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ, ಸಂಸ್ಥೆ ಉಳಿತಾಯ ಮನೋಭಾವ ಬೆಳೆಸಿ ಮಹಿಳಾ ಸಬಲೀಕರಣ ಮಾಡುವ ಜತೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಚಟುವಟಿಕೆ ನಡೆಸುತ್ತದೆ. ಸಾಮಾಜಿಕ ಕಳಕಳಿಯ ಶ್ರದ್ಧಾಕೇಂದ್ರ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ನಿರ್ಮಿಸುವ ದೇವಸ್ಥಾನಗಳಿಗೆ ಸಂಸ್ಥೆಯಿಂದ ಆರ್ಥಿಕ ಸಹಾಯ ನೀಡಲಾಗುವುದು. ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಹಾಲಪ್ಪ, ವಲಯ ಮೇಲ್ವಿಚಾರಕ ಪ್ರಭು ಮತ್ತು ಮಂಜುನಾಥ ಇದ್ದರು.

One attachment • Scanned by Gmail