ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೩೦; ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಪ್ರತಿವರ್ಷದಂತೆ ಈ ಬಾರಿಯೂ ದಿ. ಶ್ರೀಮತಿ ಬಸಮ್ಮ ವೀರಬಸಪ್ಪ ಮಾಗಿ ಕುಟುಂಬದ ವತಿಯಿಂದ ಒಂದು ಲೋಡ್ ಅಕ್ಕಿಯನ್ನು ಕಳುಹಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿಗಳಾದ ಜಯಪ್ರಕಾಶ್ ಮಾಗಿ,ಕೈಲಾಸ ಬಾಬು ಮಾಗಿ ಅವರು ಹಳೇ ಪೇಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ಭಕ್ತಿ ಸಮರ್ಪಸಿಲು ತೆರಳಿದರು.ಈ ಲಾರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರು ಮಾಜಿ ದೂಡಾ ಅಧ್ಯಕ್ಷರಾದ ದೇವರಮನಿ ಶಿವಕುಮಾರ್ ಚಾಲನೆ ನೀಡಿದರು, ಈ ಸಂದರ್ಭದಲ್ಲಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ,ಟಿ.ಪಾಟೀಲ, ಬಿ.ಪಿ.ಎಂ.ಜಗದೀಶ್,ಮಂಜುನಾಥ್,ವಿನಾಯಕ ಬ್ಯಾಡಗಿ, ಜಯರಾಜ್ ಮೇಟಿ, ಪ್ರಕಾಶ್ ಮೇಟಿ, ಎಂ.ವೈ ಆನಂದ,ಸಂಗಮೇಶ ಗದಗ, ,ಅಶೋಕ ಇಂಜಿನಿಯರ್,ಆರ್.ಎಂ ಪಂಚಾಕ್ಷರಿ,ಪರುಶುರಾಮ್ ಪಿ.ಎಸ್,ಮಾಳಗಿ ಸಿದ್ದೇಶ್,ಸತೀಶ್ ಹುಬ್ಬಳ್ಳಿ, ಸತೀಶ್ ಹುರ್ಣೇಕರ್,ಟಿಎಸ್ಎಂ,ಮಲ್ಲಿಕಾರ್ಜುನ,ನಿಖಿಲ್ ಮಾಗಿ,ಹರ್ಷ ಮಾಗಿ ಬಸವಲಿಂಗ,ಅಣಬೇರು ಮಂಜುನಾಥ, ಸಿ.ಎಂ.ಬಿ ಶಿವಕುಮಾರ್, ಅಣ್ಣಪ್ಪ ಸ್ವಾಮಿ,ಮಂಜುನಾಥ್ ಸ್ವಾಮಿ, ಚಿತ್ರಗಿ ಸಂಗಪ್ಪ,,ಕೆ.ಸಿ.ಲಿಂಗರಾಜ,
ಮತ್ತಿತರರಿದ್ದರು.