ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಹುತಾತ್ಮರ 26 ನೇ ಪುಣ್ಯ ಸ್ಮರಣೋತ್ಸವ

ಕಲಬುರಗಿ:ಜು.15:ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ 16 ರಿಂದ 17 ಜುಲೈ 2023 ರವರೆಗೆ ಎರಡು ದಿನಗಳ ಕಾಲ ಹುತಾತ್ಮರ 26 ನೇಯ ಪುಣ್ಯಸ್ಮರಣೆ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ರವಿವಾರ ದಿನಾಂಕ
16 ಜುಲೈ 2022 ರಂದು ಸಂಜೆ 6ಕ್ಕೆ ಶ್ರೀಮಠದ ಶ್ರೀ ಸದ್ಗುರು ಸಮರ್ಥ ರೇವಣಸಿದ್ಧೇಶ್ವರ ಮಹಾರಾಜರು ಹುತಾತ್ಮರ ಗದ್ದುಗೆಯ ಹಾಗೂ ದಾಸಬೋಧ ಪೂಜೆಯೊಂದಿಗೆ ಪುಣ್ಯಸ್ಮರಣೆ ಸಪ್ತಾಹಕ್ಕೆ ಚಾಲನೆ ನೀಡುವರು.
ಅಂದು ಸಂಜೆ ಅಭಿಷೇಕ ವಿಶೇಷ ಪೂಜೆ ಪುರಾಣ-ಪ್ರವಚನ, ರಾತ್ರಿ ಜಾಗರಣೆ ನಿಮಿತ್ಯ ಶ್ರೀ ಮಾಧವಾನಂದ ಪ್ರಭೂಜಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸೋಮವಾರ ದಿನಾಂಕ
17 ಜುಲೈ 2023 ರಂದು ಬೆಳಿಗ್ಗೆ 11=00 ಗಂಟೆಗೆ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಪಠಣ ಭಜನಾಪದ, ಪುರಾಣ-ಪ್ರವಚನ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪವೃಷ್ಠಿಯೊಂದಿಗೆ ಹುತಾತ್ಮರ ಪುಣ್ಯ ಸ್ಮರಣೋತ್ಸವ ಮಂಗಲಗೊಳ್ಳಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.