ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ನಾಳೆ ಶ್ರಾವಣ ಸಾಧನ ಸಪ್ತಾಹ ಮಂಗಲ

ಕಲಬುರಗಿ:ಸೆ.10:ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರಾವಣ ಮಾಸದ ಸಾಧನ ಸಪ್ತಾಹವು ಶ್ರಾವಣ ಶುದ್ದ ಪ್ರತಿಪದ ಗುರುವಾರ ದಿನಾಂಕ 17 ಅಗಷ್ಟ 2023 ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದ ಸದ್ಗುರುಗಳಾದ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ ಹಾಗೂ ಗದ್ದುಗೆಗಳ ಪೂಜೆಯೋಂದಿಗೆ ಪ್ರಾರಂಭವಾಗೊಂಡ ಸಪ್ತಾಹವು ಶ್ರಾವಣ ಬಹುಳ ದ್ವಾದಶಿ ಸೋಮವಾರ ದಿನಾಂಕ 11 ಸೆಪ್ಟೆಂಬರ 2023 ರಂದು ರಥೋತ್ಸವ. ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶಿರ್ವಚನ ಹಾಗೂ ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಳ್ಳುವದು. ತಿಂಗಳ ಪಯರ್ಂತ ಜರಗಿದ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಕಾಕಡಾರತಿ ನಂತರ ಹನ್ನೊಂದು ಗಂಟೆಯವರೆಗೆ ಧ್ಯಾನ ನಂತರ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರಿಂದ ಹಾಗೂ ವಿವಿಧಡೆಯಿಂದ ಆಗಮಿಸಿದ ಮಹಾತ್ಮರಿಂದ ಪುರಾಣ. ಪ್ರವಚನ ಮಧ್ಯಾಹ್ನದ ಭಜನೆ ನಂತರ ಪ್ರಸಾದ ಸಾಯಂಕಾಲ ಐದು ಗಂಟೆಯವರೆಗೆ ಶ್ರಮದಾನ. ವಿಶ್ರಾಂತಿ. ಸಾಯಂಕಾಲ ಐದು ಗಂಟೆಗೆ ಭಜನೆ ಪುರಾಣ ಪ್ರವಚನ ನಂತರ ರಾತ್ರಿ ಎಂಟು ಗಂಟೆಗೆ ಶ್ರೀ ಸಂತ ತುಕಾರಾಮ ಮಹಾರಾಜರ ಬಾರಾ ಅಭಂಗ ಭಜನೆ ನಂತರ ಚಿಕ್ಕ ಮಕ್ಕಳಿಂದ ವಿವಿಧಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು . ಗುರುವಾರ ದಿನಾಂಕ 7 ಸೆಪ್ಟೆಂಬರ 2023 ರಂದು ಶ್ರೀಕೃಷ್ಣಾಷ್ಠಮಿ ನಿಮಿತ್ಯ ಶ್ರೀಕೃಷ್ಣ ತೊಟ್ಟಿಲೋತ್ಸವ ಕಾರ್ಯಕ್ರಮ ಜರಗಿತು ಈ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು “ಕಂಸ ವಧೆ” ಎಂಬ ಕಿರು ನಾಟಕ ಪ್ರದರ್ಶಿಸಿದರು. ಅತ್ಯಂತ ವೈಶಿಷ್ಟ್ಯವಾಗಿ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿ ದಿನ ಶ್ರೀ ಸದ್ಗುರು ಸಮರ್ಥ ರಾಮದಾಸ ಮಹಾರಾಜರ ದಾಸಬೋದ. ಶ್ರೀ ಸಂತ ವಿನೋಬಾ ಭಾವೆ ಅವರ ಗೀತಾ ಪ್ರವಚನ. ಶರಣ ಶರಣೆಯರಿಂದ ಭಕ್ತಿ ಸಂಗೀತ. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು ಈ ಸರ್ವ ಕಾರ್ಯಕ್ರಮಗಳು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರಗುವವು. ಅತ್ಯಂತ ವಿಜೃಂಭಣೆಯಿಂದ ಜರಗುವ ಈ ಶ್ರಾವಣ ಸಾಧನ ಸಪ್ತಾಹಕ್ಕೆ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಲಾಗಿದೆ.