ಶ್ರೀ ಕೇದಾರ ಜಗದ್ಗುರುಗಳ ಆರೋಗ್ಯ ವಿಚಾರಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು

ಕಲಬುರಗಿ:(ನಾಂದೇಡ) ನ.3:ಇತ್ತೀಚೆಗೆ ಲಘು ಹೃದಯಾಘಾತಕ್ಕೆ ಒಳಗಾಗಿ ಮುಂಬಯಿ ಜಸ್ಲೋಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಾಂದೇಡ ದಶಮುಖ ಆಶ್ರಮದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶ್ರೀ ಹಿಮವತ್ಕೇದಾರ ಭೀಮಾಶಂಕರ ಜಗದ್ಗುರುಗಳವರನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಧ್ಯ ತಮ್ಮ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆಯಾಗಿದ್ದು ಭಕ್ತರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಶ್ರೀ ಕೇದಾರ ಜಗದ್ಗುರುಗಳು ಸ್ಪಷ್ಟಪಡಿಸಿದರು. ಆದಷ್ಟು ಬೇಗನೇ ಶ್ರೀ ಕೇದಾರ ಜಗದ್ಗುರುಗಳು ಗುಣಮುಖರಾಗಿ ಭಕ್ತ ಸಮುದಾಯದ ಕಾರ್ಯ ಕಲಾಪಗಳಲ್ಲಿ ಪಾಲ್ಗೊಂಡು ದರ್ಶನ ಕೊಡಲೆಂದು ಬಯಸಿ ರೇಶ್ಮೆ ಮಡಿ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಗೌರವಿಸಿದರು.

ಈ ಸಂದರ್ಭದಲ್ಲಿ ಬಿಚಗುಂದ, ಮೇಹಕರ, ಸ್ಟೇಷನ್ ಬಬಲಾದ, ಉದ್ಗೀರ, ಸಿದ್ಧರಬೆಟ್ಟ, ನವಿಲಕಲ್ಲು ಮಠಾಧೀಶರು ಮತ್ತು ಕಲಬುರ್ಗಿ ನಾಂದೇಡದ ಭಕ್ತರು ಉಪಸ್ಥಿತರಿದ್ದು ಉಭಯ ಜಗದ್ಗುರುಗಳ ಆಶೀರ್ವಾದ ಪಡೆದರು.