ಶ್ರೀ ಕೆಂಡಗಣ್ಣಸ್ವಾಮಿ, ಮಹದೇಶ್ವರಸ್ವಾಮಿಗೆ ವಿಶೇಷ ಪೂಜೆ

ಹುಣಸೂರು,ನ.23:- ಐತಿಹಾಸವುಳ್ಳ ಕೆಂಡಗಣ್ಣಸ್ವಾಮಿಗದ್ದಿಗೆಯಲ್ಲಿ ಕಡೆಕಾರ್ತಿಕದ ಅಂಗವಾಗಿ ಎರಡು ದಿನಗಳ ಕಾಲ ನಡೆದ ಶ್ರೀಕೆಂಡಗಣ್ಣಸ್ವಾಮಿ ಮತ್ತು ಶ್ರೀ ಮಹದೇಶ್ವರಸ್ವಾಮಿಯ ವಿಶೇಷ ಪೂಜಾ ಪಲ್ಲಕ್ಕಿ ಉತ್ಸವ-ದೀಪೋತ್ಸವ, ಸಿಡಿಮದ್ದು ಪ್ರದರ್ಶನವು ವಿಜೃಂಭಣೆಯಿಂದ ನೆರವೇರಿತು.
ಮೊದಲ ದಿನ ದೇವರಿಗೆರು ದ್ರಾಭಿಷೇಕ, ಸಹಸ್ರನಾಮ, ರಾಜೋಪಚಾರ, ಮಹಾಮಂಗಳಾರತಿ ಪ್ರಾಂಗಣದಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ ದೀಪೋತ್ಸವ ನಡೆಯಿತು. 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಈ ಎಲ್ಲ ಪೂಜಾ ಕೈಂಕರ್ಯಗಳು ಹಾಗೂ ಅನ್ನದಾಸೋಹದ ವ್ಯವಸ್ಥೆಯನ್ನು ದೇವಸ್ಥಾನದ ನಿರ್ಮಾತೃ ಅರಕಲಗೂಡು ತಾಲ್ಲೂಕು ಬಸವಾಪಟ್ಟಣದ ತೊಟ್ಟಿಮನೆಯ ಲಿಂಗೈಕ್ಯ ಸಿದ್ದಬಸಪ್ಪಶೆಟ್ಟರ ಕುಟುಂಬದ ವಿಶಾಲಾಕ್ಷಮ್ಮ ಮತ್ತು ಮಕ್ಕಳು ನಡೆಸಿಕೊಟ್ಟರು.
ಸೋಮವಾರದಂದು ಮುಂಜಾನೆಯಿಂದಲೇ ಆರಂಭಗೊಂಡದೇವರ ಪೂಜೆ ತಡರಾತ್ರಿವರೆಗೂ ನಡೆಯಿತು. ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತುದೇವರದರ್ಶನ ಪಡೆದರು.ರಾತ್ರಿ ಗದ್ದಿಗೆಯ ರಾಜಬೀದಿಯಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ ಹಾಗೂ ವೈಭವದ ದೀಪೋತ್ಸವ ನಡೆಯಿತು.