ರಾಯಚೂರು,ಮೇ.೩೧-
ನಗರದ ಹರಿಜನವಾಡದ ಶ್ರೀ ಮಹಾಮಾತೆ ಕೆಂಚು ಮಾರೆಮ್ಮ ದೇವಿ ರಥೋತ್ಸವ ಅಂಗವಾಗಿ
ನಗರ ಮತ್ತು ಗ್ರಾಮೀಣ ಯುವಕರಾಗಿ ಕೈ ಕಲ್ಲು ಭಾರ ಎತ್ತುವ ಸ್ಪರ್ಧೆಯು ನಾಳೆ ಮದ್ಯಾಹ್ನ ೧೨ ಘಂಟೆಯಿಂದ ೨ ಯವರೆಗೆ ಸ್ಪರ್ಧಯನ್ನು ಏರ್ಪಡಿಸಲಾಗಿದೆ ಎಂದು ಮಾಜಿ ನಗರಸಭೆ ಉಪಾಧ್ಯಕ್ಷ ನರಸಮ್ಮ ನರಸಿಂಹಲು ಮಾಡಗಿರಿ ಅವರು ಹೇಳಿದರು.
ವಿಜೇತರಿಗೆ ಪ್ರಥಮ ಬಹುಮಾನ ೧೦ ತೊಲೆ ಬೆಳ್ಳಿ ಕಡಗ ದ್ವಿತೀಯ ಬಹುಮಾನ ೫ತೊಲೆ ಬೆಳ್ಳಿ ಹಾಗೂ ತೃತೀಯ ಬಹುಮಾನ ೩ ತೊಲೆ ಬೆಳ್ಳಿ ಕಡಗ ನೀಡಲಾಗುತ್ತದೆ ಎಂದರು.
ಭಾಗವಹಿಸುವ ಆಸಕ್ತರು ಈ ಕೆಳಗಿನ ನಂಬರಗಳಿಗೆ ೯೪೪೮೬೪೯೨೮೫, ೯೧೧೦೬೩೦೦೮೭ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.