
ಕಲಬುರಗಿ,ಸೆ.06:ಶ್ರೀ ಕೃಷ್ಣ ಮನುಕುಲಕ್ಕೆ ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಅವರು ಹೇಳಿದರು.
ಬುಧುವಾರದಂದು ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಹಯೋಗದೊಂದಿಗೆ ನಗರದ ಡಾ. ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶ್ರೀ ಕೃಷ್ಣ ಪರಮಾತ್ಮ ಅವತಾರ ಪುರುಷನಾಗಿದ್ದು, ಶ್ರೀ ಕೃಷ್ಣ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ್ದು, ಶ್ರೀ ಕೃಷ್ಣನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕಷ್ಟಗಳು ಕಳೆದು ಹೋಗುತ್ತವೆ. ಕೃಷ್ಣನನ್ನು ನೆನೆದಾಗ ಬದುಕಿನ ಕಷ್ಟಗಳೆಲ್ಲವೂ ಮಾಯವಾಗುತ್ತವೆ. ಶ್ರೀ ಕೃಷ್ಣನು ಮಾನವರಿಗೆ ಉತ್ತಮ ಜೀವನ ಸಂದೇಶ ನೀಡಿರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ನೂತನ ವಿದ್ಯಾಲಯ, ಪದವಿ ಮಹಾವಿದ್ಯಾಲಯದ ಸಂಸ್ಕøತ ವಿಭಾಗದ ಅಧ್ಯಕ್ಷರಾದ ಡಾ. ಗುರುಮಧ್ವಾಚಾರ್ಯ ಅವರು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್, ಜಯಂತೋತ್ಸವ ಸಮಿತಿ ಜಿಲ್ಲಾಧ್ಯಕ್ಷ ರವಿ ಉದನೂರು, ಎಸ್.ಎಸ್. ಕುಲಕರ್ಣಿ, ಆರ್.ಆರ್ ಯಾದವ್, ಕಲ್ಲಪ್ಪ ಯಾದವ್, ಪದ್ಮಕರ್ ಚಿಂಚೋಳಿ, ಗೋವಿಂದ್ರಪ್ಪ ಸೇಡಂ, ಮಲ್ಲಿಕಾರ್ಜುನ್ ಉದನೂರು ತುಕಾರಾಮ ಚಿತ್ತಾಪೂರ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಸ್ವಾಗತಿಸಿದರು. ಶಿವಾನಂದ ಅಣಜಗಿ ಕಾರ್ಯಕ್ರಮ ನಿರೂಪಿಸಿದರು.