ಶ್ರೀ ಕೃಷ್ಣ ಪರಮಾತ್ಮ ನೀಡಿದ ಜೀವನ ಸಂದೇಶವನ್ನು ಅಳವಡಿಸಿಕೊಳ್ಳಿ

ರಾಯಚೂರು,ಸೆ .೬- ಶ್ರೀ ಕೃಷ್ಣ ಪರಮಾತ್ಮ ಅವತಾರ ಪುರುಷನಾಗಿದ್ದು, ಶ್ರೀ ಕೃಷ್ಣ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ್ದು, ಶ್ರೀ ಕೃಷ್ಣನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕಷ್ಟಗಳು ಕಳೆದು ಹೋಗುತ್ತವೆ ಎಂದು ವಕೀಲರಾದ ಎನ್.ಶಂಕ್ರಪ್ಪ ಅವರು ಹೇಳಿದರು.
ನಗರದ ಕೃಷ್ಣ ದೇವಸ್ಥಾನ ಯಾದವ ಸಂಘದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಆಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಉಪನ್ಯಾಸ ನೀಡಿ ಮಾತನಾಡಿದರು.
ಕೃಷ್ಣನನ್ನು ನೆನೆದಾಗ ಬದುಕಿನ ಕಷ್ಟಗಳೆಲ್ಲವೂ ಮಾಯವಾಗುತ್ತವೆ. ಶ್ರೀ ಕೃಷ್ಣನು ಮಾನವರಿಗೆ ಉತ್ತಮ ಜೀವನ ಸಂದೇಶಗಳನ್ನು ನೀಡಿದ್ದು, ಧರ್ಮವನ್ನು ರಕ್ಷಿಸುವ ಕುರಿತು ಹಾಗೂ ಕರ್ತವ್ಯ ಪಾಲನೆಯನ್ನು ಹಲವು ಸಂದೇಶಗಳನ್ನು ಬೋದಧಿಸಿದ್ದಾನೆ. ಜಾತಿಗಳನ್ನು ಮರೆತು ಸೇವೆ ಮಾಡಲು ಮುಂದಾಗಬೇಕು ಎಂಬ ವಿಚಾರವನ್ನು ತಿಳಿಸಿದ್ದಾನೆ.
ಸನಾತನ ಧರ್ಮ ಹತ್ತಾರು ಸಾವಿರ ವರ್ಷಗಳ ಹಿಂಎಯಿಂದ ಇದ್ದು, ಮತ್ತೊಬ್ಬರಿಗೆ ಉಪಕಾರ ಮಾಡುವ ವೀಚಾರವನ್ನು ತಿಳಿಸಿಕೊಟ್ಟಿದೆ. ಸರ್ವೇಜನ ಸುಕಿನೋ ಭವಂತು ಎಂಬ ಮಾತನ್ನು ಸನಾತನ ಧರ್ಮ ತಿಳಿಸಿಕೊಡುತ್ತದೆ. ಜಗತ್ತಿಗೆ ಮಾರ್ಗದರ್ಶನ ನೀಡಿದ ಧರ್ಮ ಸನಾತನ ಧರ್ಮವಾಗಿದೆ ಎಂದರು.
ಹಿಮಾಲಯದಿಂದ ಹಿಂದು ಮಹಾಸಾಗರದವರೆಗೆ ಭಗವಂತನಿಂದ ಸೃಷ್ಠಿಯಾದ ಸಮಾಜದಲ್ಲಿ ಶ್ರೀಕೃಷ್ಣ ಅವತಾರವೆತ್ತಿದ್ದಾನೆ. ಸಮಾಜದಲ್ಲಿ ಧರ್ಮ ನಶೀಸಿಹೋಗುವವಾಗ ಧರ್ಮ ರಕ್ಷಣೆಗೆ ಹಾಗೂ ದುಷ್ಟರಿಗೆ ಶಿಕ್ಷೆ ನೀಡಲು ಹಾಗೂ ಶಿಷ್ಟರನ್ನು ರಕ್ಷಣೆ ಮಾಡಲು ಮತ್ತೆ ಹುಟ್ಟುವುದಾಗ ಶ್ರೀಕೃಷ್ಣ ಜನ್ಮವೆತ್ತುವುದಾಗ ಭಗವತ್ಗೀತೆಯಲ್ಲಿ ತಿಳಿಸಿದ್ದಾನೆ ಎಂದು ಹೇಳಿದರು.
ದ್ರೌಪದಿಯ ವಸ್ತ್ರಾಭರಣದ ಸಂದರ್ಭದಲ್ಲಿ ಸ್ತ್ರೀ ರಕ್ಷಣೆಗಾಗಿ ಬಂದ ಮಹಾನ್ ಪರಮಾತ್ಮ ಶ್ರೀ ಕೃಷ್ಣನಾಗಿದ್ದಾನೆ. ಹಾಗೂ ಆಪತ್ಬಾಂದವನಾಗಿದ್ದಾನೆ. ಶ್ರೀ ಕೃಷ್ಣ ಮನುಕುಲಕ್ಕೆ ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಮಾಜದ ಮುಖಂಡರಾದ ಕೆ.ಮಾರೆಪ್ಪ, ಹರೀಶ ನಾಡಗೌಡ, ಹನುಮಂತಪ್ಪ, ಚಿನ್ನಾರೆಡ್ಡಿ ಯಾದವ, ಶರಣಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.