ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.10:- ಶ್ರೀ ಕೃಷ್ಣ ನಾಮ ಮಂತ್ರಜಪದ ಮೂಲಕ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಶ್ರೀ ಕೃಷ್ಣ ಪ್ರತಿμÁ್ಠನದ ಅಧ್ಯಕ್ಷರಾದ ಸುರೇಶ್ ಎನ್‍ಋಗ್ವೇದಿ ತಿಳಿಸಿದರು.
ಅವರು ಹರದನಹಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ಭಕ್ತ ಮಂಡಳಿಯ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಲ್ಲಿರುವ ಪವಿತ್ರ ಶ್ರೀ ಕೃಷ್ಣ ಭಾವನೆ, ನಗು, ಆನಂದ, ಪ್ರೀತಿ, ಧರ್ಮ ಸಂರಕ್ಷಣೆಯನ್ನು ನಾವು ರೂಡಿಸಿಕೊಳ್ಳೋಣ. ಭಗವಂತನಕಾರ್ಯವನ್ನು ಶ್ರದ್ಧೆ, ಭಕ್ತಿಯಿಂದ ಮಾಡಬೇಕು ದೇವರ ಸೇವೆಯನ್ನು ನಿರಂತರವಾಗಿ ಮಾಡೋಣ. ಸರ್ವರಿಗೂ ಒಳ್ಳೆಯ ಭಾವನೆ, ಶಾಂತಿ ಮೂಡಲಿ. ಶ್ರೀ ಕೃಷ್ಣನ ಸ್ಮರಣೆಯೇ ನಮಗೆ ದಿವ್ಯ ಶಕ್ತಿ ನೀಡುತ್ತದೆ. ಶ್ರೀ ರಾಧಾಕೃಷ್ಣ ವೇಷಧಾರಿಗಳು ಭಗವಂತನ ಸ್ವರೂಪ. ಮಕ್ಕಳ ಶುದ್ಧ ಮನಸ್ಸು ನಮ್ಮದಾಗಲಿ. ಬೆಣ್ಣೆಯಂತೆ ಶುದ್ಧತೆ, ಪರಿಪೂರ್ಣತೆ, ಮೃದುತ್ವಜೀವನ ನಮ್ಮದಾಗಲಿ. ಅಹಂಕಾರ ಬಿಡೋಣ, ಪ್ರೀತಿಯ ಸಮಾಜ ಕಟ್ಟೋಣ. ಸದಾ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಸಂಸ್ಕøತಿ, ಪರಂಪರೆಯನ್ನು ರಕ್ಷಿಸೋಣ. ವಿನಾಯಕನ ಭಕ್ತ ಮಂಡಳಿ ಸ್ಥಾಪಿಸಿ ಉತ್ತಮ ಕಾರ್ಯ ಮಾಡಿಗ್ರಾಮದ ಏಳಿಗೆಯನ್ನು ನಿರ್ವಹಿಸುತ್ತಿರುವಯುವಕರು ಮಾದರಿ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿರವರು ಮಾತನಾಡಿ ಶ್ರೀ ಕೃಷ್ಣನಜನನ ಭಾರತದಲ್ಲಿ ಆಗಿ ದುಷ್ಟ ಶಕ್ತಿಗಳ ನಿರ್ಮೂಲನೆ ಮಾಡಿಧರ್ಮ ಸ್ಥಾಪನೆ ಮಾಡಿದ ಶ್ರೀ ಕೃಷ್ಣನ ಸಂದೇಶಗಳು ಪ್ರತಿಯೊಬ್ಬಜಗತ್ತಿನ ಮಾನವನಿಗೆ ಅಮೂಲ್ಯವಾದದ್ದು. ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಶ್ರೀ ಕೃಷ್ಣನ ವಾಣಿಯಂತೆ ನಾವು ಸನ್ಮಾರ್ಗದಲ್ಲಿ ನಡೆಯಬೇಕು. ಶ್ರೀ ಕೃಷ್ಣನ ಜನ್ಮವಾದಾಗ ಬಂಧನದಲ್ಲಿದ್ದ ಶ್ರೀ ಕೃಷ್ಣ ಪರಮಾತ್ಮನನ್ನು ಬಂಧಿಸಿದ್ದ ಎಂಟು ಬೀಗಗಳು ಕಳಚಿ ಹೋದವು. ಶ್ರೀ ಕೃಷ್ಣನಜನ್ಮವು ಆಲದ ಎಲೆಯ ಮೇಲೆ ಆಗಿ, ಭಾರತದ ರೂಪವೂ ಆಲದ ಎಲೆಯಂತೆ ಮೂಡಿ ಇಡೀ ಜಗತ್ತಿಗೆ ಸಂಸ್ಕೃತಿ,ಪರಂಪರೆ, ಶಾಂತಿ, ಧರ್ಮ, ನಾಗರಿಕತೆಯನ್ನು ನೀಡಿದ ದೇಶ ಭಾರತವಾಗಿದೆ.
ದೇಹ ಅಭಿಮಾನವನ್ನು ಒಡೆಯುವ ಸಂಕೇತವೇ ಮೊಸರು ಮಡಿಕೆ ಹೊಡೆಯುವ ಉತ್ಸವ. ಅಹಂಕಾರವನ್ನು ಬಿಡೋಣ, ಜ್ಞಾನ ಸಂಪಾದನೆಯಿಂದ ಸ್ವ ಪರಿವರ್ತನೆಯ ಮೂಲಕ ವಿಶ್ವ ಪರಿವರ್ತನೆಯನ್ನು ಮಾಡೋಣ. ಹಳ್ಳಿಗಳು ಪ್ರೀತಿಯ ಸಾಗರವಾಗಬೇಕು. ಆದರೆ ಇಂದು ಹಳ್ಳಿಗಳು ಸಂಕುಚಿತ ಭಾವನೆಯಿಂದ ನರಳುತ್ತಿದೆ. ಹಳ್ಳಿಗಳು ಪವಿತ್ರತೆಯ ಸಂಕೇತ ಹಳ್ಳಿಗಳಲ್ಲಿ ಯುವಶಕ್ತಿಯನ್ನು ಬೆಳೆಸೋಣ. ನಾನತ್ವದಅಹಂಕಾರವನ್ನು ತ್ಯಜಿಸಿ, ನಮ್ಮ ಹೃದಯವನ್ನು ಶ್ರೀಮಂತ ಗೊಳಿಸಿಕೊಳ್ಳಲು ಶ್ರೀ ಕೃಷ್ಣನ ಸಂದೇಶಗಳು ನಮಗೆ ಮಾರ್ಗದರ್ಶವಾಗಲಿ. ಯುವಶಕ್ತಿ ಶ್ರದ್ಧೆಯಿಂದ ಭಕ್ತಿಯಿಂದ ಎಲ್ಲಾ ಕಾರ್ಯವನ್ನು ನಿರ್ವಹಿಸುತ್ತಿರುವುದು ಮೆಚ್ಚುವ ಸಂಗತಿಎಂದರು.
ಶ್ರೀ ಕೃಷ್ಣಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ 30ಕ್ಕೂ ಹೆಚ್ಚು ರಾಧಾಕೃಷ್ಣರು ವಿವಿಧರಾಧಾಕೃಷ್ಣ ವೇಷ ಭೂಷಣಗಳೊಂದಿಗೆ ಮೊಸರು ಮಡಿಕೆಒಡೆದು ಬೆಣ್ಣೆತೆಗೆದು ಆನಂದದಲ್ಲಿ ಮುಳುಗಿದರು. ಶ್ರೀ ವಿನಾಯಕ ಭಕ್ತ ಮಂಡಳಿಯ ಸದಸ್ಯರು, ಗ್ರಾಮದ ಭಕ್ತರು, ಮುಖಂಡರು, ಮಹಿಳೆಯರು ಇದ್ದರು.