
ಬೀದರ :ಸೆ.7:ತಾಲ್ಲೂಕಿನ ಆಣದೂರ ಗ್ರಾಮದ ಸರ್ವಜ್ಞ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶ್ರೀ ಕೃಷ್ಣ ಜಯಂತಿ ಹಾಗೂ 62 ನೇ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಹಲವು ಮಕ್ಕಳು ಕೃಷ್ಣ ಮತ್ತು ರಾಧ ವೇಷ ಧಾರಿಗಳಾಗಿ ಕಣ್ಮನ ಸೇಳೆದರು ಹಾಗೂ ನೃತ್ಯ ಮಾಡುವ ಮೂಲಕ ಆನಂದಿಸಿರುವರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಬೀದರಿನ ವಲಯ ಮೇಲ್ವಿಚಾರಕರಾದ ಶ್ರೀ ಭಮಣ್ಣ ಅವರು ಭಗವಾನ ಶ್ರೀ ಕೃಷ್ಣ ಭಗವಾನ ವಿಷ್ಣುವಿನ 8 ನೇ ಅವತಾರ ಪುರುಷ ದ್ವಾಪರ ಯುಗ ಶ್ರೀ ಕೃಷ್ಣನ ಕಾಲವಾಗಿದೆ. ಕೃಷ್ಣನನ್ನು ಗಿರ್ದಾರಿ, ಮಧುಬನ್, ಗೋಪಾಲ ಮುಂತಾದ ಅನೇಕ ಹೆಸರುಗಳಿಂದ ಪ್ರಸಿದ್ಧವಾಗಿರುವನು ಶ್ರೀ ಕೃಷ್ಣನು ಅರ್ಜುನನಿಗೆ ಶಿಕ್ಷಕ, ರಕ್ಷಕ, ಸ್ನೇಹಿತ, ತತ್ವಜ್ಞಾನಿಯಾಗಿ, ರಾಜರ್ಷಿಯಾಗಿ ಕಾರ್ಯನಿರ್ವಹಿಸಿದನು. ಮಹಾಭಾರತ, ಮಹಾಕಾವ್ಯದಲ್ಲಿ ಶ್ರೀ ಕೃಷ್ಣನ ಪಾತ್ರ ಪ್ರಮುಖವಾಗಿ ಚಿತ್ರಿತವಾಗಿದೆ. ಕೃಷ್ಣನ ಬೋಧನೆಗಳನ್ನು ಭಗವತಗೀತೆಯಲ್ಲಿ ಕಾಣಬಹುದು. ಭಗವತಗೀತೆ ಮನುಕುಲದ ಒಳಿತನು ಸಾರುವ ಅತ್ಯಮೂಲ್ಯ ಗ್ರಂಥವಾಗಿದೆಯಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮ ವಿಕಾಸ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಬಸವರಾಜ ಬಶೆಟ್ಟಿ ಅವರು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡುತ್ತಾ, ಸರ್ವಪಲ್ಲಿ ರಾಧಕೃಷ್ಣರು ನಮ್ಮ ದೇಶದ ಉಪರಾಷ್ಟ್ರಪತಿ, ತತ್ವಜ್ಞಾನಿ ಅಷ್ಟೆ ಅಲ್ಲದೆ, ಸರ್ವಶ್ರೇಷ್ಠ ಶಿಕ್ಷಕ ತಜ್ಞರಾಗಿದ್ದರು. ರಾಧಕೃಷ್ಣರು ಭಾರತ ಮತ್ತು ಪಶ್ಚಿಮತ್ಯ ಎರಡು ಕಡೆಗೂ ಹಿಂದೂ ಧರ್ಮದ ನೈಜ್ಯ ತಿಳುವಳಿಕೆ ಮುಡಿಸಲು ತಮ್ಮ ಭಾಷಣ ಸಾಹಿತ್ಯ ರಚನೆ ಮೂಲಕ ಪ್ರಭಾವಿ ಕಾರ್ಯ ಮಾಡಿದ್ದಾರೆ. ಶಿಕ್ಷಕರು ರಾಷ್ಟ್ರ ನಿರ್ಮಣ ಕರ್ತರು ಎಂಬುವುದು ಅವರ ನಂಬಿಕೆಯಾಗಿತ್ತು. 1962 ರಿಂದ ಭಾರತದಲ್ಲಿ ಅವರ ಜನ್ಮದಿನವಾದ ಸಪ್ಟೆಂಬರ್ 5 ರಿಂದ ಪ್ರತಿ ವರ್ಷ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ರಾಧಕೃಷ್ಣರ ಸೇವೆ ಸಾಧನೆ ನಿಮಿತ್ಯ ಅವರಿಗೆ ಭಾರತರತ್ನ ಪ್ರಶಸ್ತಿ, ಟಿಂಪಲ್ಟನ್ ಪ್ರಶಸ್ತಿ ಅಂತಹ ಅನೇಕ ಶ್ರೇಷ್ಠ ಪ್ರಶಸ್ತಿಗಳು ಲಂಬಿಸಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಣದೂರ ಗ್ರಾಮದ ಯುವ ಮುಖಂಡರಾದ ಶ್ರೀ ಶಿವಕುಮಾರ ಹಿರೆಮಠ ಕಪಲಾಪೂರ ಗ್ರಾಮದಲ್ಲಿಯ ಬಸವಶ್ರೀ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಶ್ರೀ ಚನ್ನಬಸವ ಘಾಳಠ ಭಾಗವಹಿಸಿದರು. ಸರ್ವಜ್ಞ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀ ಸಂತೋಷ ಗೊರ್ಟೆ, ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಕು. ದಿವ್ಯಾರಾಣಿ ಉಪಸ್ಥಿತರಿದ್ದರು.
ಇಡಿ ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳು ನಿರ್ವಹಿಸಿದರು. ನಿರೂಪಣೆಯಲ್ಲಿ 10 ನೇ ತರಗತಿಯ ಪೂಜಾ ನಸಿಂಗ್ ಸ್ವಾಗತವನ್ನು, 9 ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ, ಪ್ರಾಥಮಿಕ ವಿಭಾಗದ ಮಕ್ಕಳು ನೆರವೇರಿಸಿದರು.