ಶ್ರೀ ಕೃಷ್ಣನ ಸಾಕ್ಷಾತ್ಕಾರವೇ ಭಾಗವತ ಗ್ರಂಥ

ಸತ್ತೂರು,ಆ11: ಕಲಿಯುಗದಲ್ಲಿ ಶ್ರೀ ಕೃಷ್ಣನ ಸಾಕ್ಷಾತ್ಕಾರ ಎಂದರೆ ಭಾಗವತ ಗ್ರಂಥ. ಭಾಗವತದ ಶ್ರವಣ ಮಾಡಿದ ಪ್ರತಿ ಮಾನವರು ನಮ್ಮ ನಮ್ಮ ಪುಣ್ಯದ ಭಾಗವ ತಾ ಎಂದು ದೇವರನ್ನು ಕೇಳಬಹುದು. ವೇದದಿಂದಲೇ ಭಗವಂತನಲ್ಲಿ ಜ್ಞಾನ ಬರುತ್ತದೆ. ವೇದೈಶ್ಚ ಸರ್ವೈ: ಅಹಮೇವ ವೇದ್ಯ: ಎಂದು ಗೀತೆಯಲ್ಲಿ ಕೃಷ್ಣ ಹೇಳಿದ. ವೇದದ ಸಾರವೇ ಶ್ರೀಮದ್ಭಾಗವತ ಎಂದು ಪ್ರವಚನ ಪ್ರವೀಣ ಪ್ರಶಸ್ತಿ ವಿಜೇತರಾದ ಪಂ. ಡಾ. ವೆಂಕಟನರಸಿಂಹಾಚಾರ್ಯ ಜೋಶಿಯವರು ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ಸಂಜೀವ ಜೋಶಿಯವರ ನಿವಾಸದಲ್ಲಿ ಅಧಿಕ ಶ್ರಾವಣ ಮಾಸದ ಹಿನ್ನಲೆಯಲ್ಲಿ ಶ್ರೀಮದ್ಭಾಗವತ ಸಪ್ತಾಹದ ಮಂಗಲೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಾ, ಭಾಗವತದಲ್ಲಿ ಎಲ್ಲ ದೇವತೆಗಳ ಹಿರಿಮೆ, ಗರಿಮೆಗಳನ್ನು ತಿಳಿಸುವುದರ ಜೊತೆಗೆ, ಭಗವಂತನ ಭಕ್ತರಾದ ಪ್ರಲ್ಹಾದ , ಧೃವ , ಸುಧಾಮ, ದ್ರೌಪದಿ, ಪಾಂಡವರೇ ಮೊದಲಾದ ಭಾಗವತರ ಚರಿತ್ರೆಯು ಸಹ ಇಲ್ಲಿ ನಿರೂಪಿತವಾಗಿದೆ. ನರ ನಾರಾಯಣ ಹಾಗೂ ಶಿವನ ಭಕ್ತನಾದ ಮಾರ್ಕಂಡೆಯನ ಚರಿತ್ರೆಯ ಮನೋಜ್ಞ ವಾಗಿ ಮೂಡಿ ಬ0ದಿದೆ. ಹನ್ನೆರೆಡು ಸ್ಕಂದಗಳನ್ನು ಎಳು ದಿನಗಳವರೆಗೆ ಶ್ರೀ ಶುಕ ಮುನಿಗಳು ಪರೀಕ್ಷಿತ ಮಹಾರಾಜನಿಗೆ ನಿರೂಪಿಸಿದ್ದಾರೆ ಎಂದು ಸುಂದರವಾಗಿ ವಿಶ್ಲೇಶಿಸಿದರು.
ಕಾರ್ಯಕ್ರಮದಲ್ಲಿ ರಘೂತ್ತಮ ಅವಧಾನಿ, ವಿಲಾಸ ಸಬನೀಸ, ಡಿ.ಕೆ. ಜೋಶಿ, ಕೃಷ್ಣ ಹುನಗುಂದ, ವಿಠ್ಠಲ ಅಂಬೇಕರ, ಡಾ. ಶ್ರೀನಾಥ, ರಮೇಶ ಅಣ್ಣಿಗೇರಿ, ಅನಿಲ ಹರಿಹರ, ಎಲ್. ವಿ. ಜೋಶಿ, ಪೆÇ್ರ. ವಾಮನ ಭಾದ್ರಿ, ಭೀಮಸೇನ ದಿಗ್ಗಾವಿ, ಗಿರೀಶ ಪಾಟೀಲ, ಎಸ್. ಎಂ. ಜೋಶಿ, ಹನುಮಂತ ಬಿಜಾಪೂರ, ಆನಂದ ಬಾಗಲ, ಎಂ. ಆರ್. ಕಲಕೋಟಿ, ವೆಂಕಟೇಶ ಕುಲಕರ್ಣಿ, ಮಧುಕರ ಜೋರಾಪೂರ, ರಾಘವೇಂದ್ರ ಮುಂಡಗೋಡ, ಭೀಮರಾವ ಗಡ, ಪೆÇ್ರ. ಸಿ.ಕೆ. ಕುಲಕರ್ಣಿ, ಆನಂದ ದೇಶಪಾಂಡೆ, ಗುರುನಾಥ ಸರದೇಶಮುಖ, ಶ್ರೀನಿವಾಸ ಪಟ್ಟಣಕುಡಿ, ಪಾಂಡುರಂಗ ಕುಲಕರ್ಣಿ ಅಶೋಕ ಬಹದ್ದೂರ ದೇಸಾಯಿ, ಬದರಿನಾಥ ಬೆಟಗೇರಿ ವಾದಿರಾಜಾಚಾರ್ಯ, ಗೋಪಾಲಾಚಾರ್ಯ ಹರಿಹರ, ವಿಲಾಸ ಜೋಶಿ, ಪಿ.ಆರ್.ಎನ್ ಸರದೇಸಾಯಿ ಉಪಸ್ಥಿತರಿದ್ದರು.