ಶ್ರೀ ಕಾಳಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ


ನ್ಯಾಮತಿ.ಅ.೨೭; ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ ಮೂರ್ತಿಯ ಉತ್ಸವ ದೇಗುಲದ ಅವರಣದಲ್ಲಿ ಮಂಗಳವಾದ್ಯದೊಂದಿಗೆ ಕೊರೋನದಿಂದಾಗಿ ಸರಳವಾಗಿ ನಡೆಯಿತು.ಪಟ್ಟಣದ ಶ್ರೀ ಕಾಳಿಕದೇವಿ ಬೀದಿಯ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ಶ್ರೀ ಕಾಳಿಕಾಂಬಾ ದೇವಿಯ ಶರನ್ನವರಾತ್ರಿಯ ದಸರ ಮಹೋತ್ಸವವು ಹಾಗೂ ಪುರಾಣ ಪ್ರವಚನ ಕಾರ್ಯಕ್ರಮವು ದಸರಾ ಹಬ್ಬದ ಅಶ್ವಿಜ ಮಾಸದ ಬಹುಳ ಪಾಡ್ಯಮಿಯಿಂದ ಘಟಸ್ಥಾಪನೆಯೊಂದಿಗೆ ಪ್ರಾರಂಭಗೊಂಡಿದ್ದ ಪೂಜಾ ಕಾರ್ಯಕ್ರಮ ಸಪ್ತಮಿ, ದುರ್ಗಾಷ್ಠಮಿ, ಮಹಾನವಮಿ, ವಿಜಯದಶಮಿ ತಿಥಿಯವರೆಗೆ ವಿಶಿಷ್ಟವಾಗಿ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಗಳನ್ನು ಆಚರಿಸಲಾಯಿತು.

ಶ್ರೀ ಕಾಳಿಕಾಂಬಾ ದೇವಿಯ ಉತ್ಸವ ಮೂರ್ತಿಯ ಉತ್ಸವದ ಅಂಗವಾಗಿ ಗಂಗಾ ಪೂಜಾಯೊಂದಿಗೆ ಪ್ರಾರಂಭಗೊಂಡು ಶ್ರೀ ಕಾಳಿಕಾಂಬಾ ದೇವಿಯೊಂದಿಗೆ ಶ್ರೀಗಣಪತಿ , ಶ್ರೀ ಈಶ್ವರ , ನವಗ್ರಹ ಶಿಲಾಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜಾ ಅಲಂಕಾರಗಳ ಪೂಜೆ ಸೇವೆಗಳು ಮತ್ತು ನವ ದುರ್ಗೆಯರ ಗೊಂಬೆಗಳನ್ನು ಸ್ಥಾಪಿಸಿ ಭಕ್ತರಿಂದ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿ ಶ್ರೀ ಕಾಳಿಕಾಂಬಾ ದೇವಿ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ದೇಗುಲದ ಅವರಣದಲ್ಲಿ ಮಂಗಳವಾದ್ಯದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಮಿತಿ , ಶ್ರೀ ವಿಶ್ವಬ್ರಾಹ್ಮಣ ಯುವ ವೇದಿಕೆ , ಶ್ರೀ ಗಾಯತ್ರಿ ಮಹಿಳಾ ಸಂಘದ ಪದಾಧಿಕಾರಿಗಳು ಸೇರಿದಂತೆ ಭಕ್ತರು ಭಾಗವಹಿಸಿದರು.