ಶ್ರೀ ಕರಿಯಪ್ಟ ತಾತ ಜಾತ್ರಾ ಮಹೋತ್ಸವ, ಪೂರ್ವಭಾವಿ ಸಭೆ

ರಾಯಚೂರು,ಆ.೦೨-ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈ ಭಾಗದ ಆರಾಧ್ಯದೈವ ಕಲ್ಮಲಾ ಕರಿಯಪ್ಪ ತಾತನವರ ಜಾತ್ರೆಯ ಪೂರ್ವಭಾವಿ ಸಭೆಯನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಬಸನಗೌಡ ದದ್ದಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರು ಬೇರೆ ಬೇರೆ ಜಿಲ್ಲೆಗಳಿಂದ ಪಕ್ಕದ ರಾಜ್ಯಗಳಿಂದಲೂ ಸಹಾ ಭಕ್ತ ಸಮೂಹ ಬರುತ್ತಾರೆ, ಯಾವುದೇ ರೀತಿಯ ಭಕ್ತಾಧಿಗಳಿಗೆ ತೊಂದರೆಯಾಗದಂತೆ, ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ, ಸ್ವಯಂ ಸೇವಕರಾಗಿ ಸೇವೆ ಮಾಡೋಣ, ಒಂದು ತಿಂಗಳ ಪೂರ್ತಿ ಜಾತ್ರೆ ನಡೆಯುತ್ತದೆ, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮತ್ತು ಗ್ರಾಮದ ಮುಖಂಡರು ಅಕ್ಕ ಪಕ್ಕದ ಗ್ರಾಮಗಳ ಮುಖಂಡರುಗಳೊಂದಿಗೆ ಸಭೆ ನಡೆಸಿದರು,
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು,ತಹಸೀಲ್ದಾರ್ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಮುಖಂಡರುಗಳು ,ಪೋಲೀಸ್ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು