ಶ್ರೀ ಕರಿಬಸವೇಶ್ವರ ಕಾರ್ತಿಕೋತ್ಸವ

 ದಾವಣಗೆರೆ.ಡಿ.೨೮; ನಗರದ ಎಸ್.ಓ.ಜಿ. ಕಾಲೋನಿ 2ನೇ ತಿರುವಿನಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಸೋಮವಾರ ರಾತ್ರಿ 6.30ಕ್ಕೆ ಏರ್ಪಡಿಸಲಾಗಿದೆ. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.ರಾತ್ರಿ 9ರಿಂದ ಭಜನಾ ಮಂಡಳಿಯಿಂದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮ ನಡೆಯಲಿದೆ.ನಂದಾದೀಪವನ್ನು  ಸರ್ವಭಕ್ತರು ಬೆಳಗಿಸುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿ, ಶ್ರೀ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಶ್ರೀ ಸ್ವಾಮಿಯ ಅರ್ಚಕರಾದ ಶ್ರೀಮತಿ ಮಂಜುಳಮ್ಮ ವಿನಂತಿಸಿದ್ದಾರೆ.