ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.06: ನಗರದ ಶ್ರೀ ಕನ್ಯಿಕಾ ಪರಮೇಶ್ವರಿ ದೇವಸ್ಥಾನ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ರಾಘವ ಕಲಾಮಂದಿರದಲ್ಲಿ ಜರುಗಿತು.
ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಅಮೃತ ಹಸ್ತಗಳಿಂದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷರಾದ ಆರ್.ಪಿ.ರವಿಶಂಖರ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಐ.ಎಸ್.ಪ್ರಸಾದ್, ಶತಮಾನೋತ್ಸವ ಸಮಿತಿಯ ಡಾ.ಡಿ.ಎಲ್. ರಮೇಶ್ ಗೋಪಾಲ್, ಜಯಪ್ರಕಾಶ್ ಜೆ.ಗುಪ್ತ, ಪೋಲಾ ರಾಧಕೃಷ್ಣ ಉಪಸ್ಥಿತರಿದ್ದರು. ಸಾವಿರಾರು ಆರ್ಯವೈಶ್ಯ ಜನರು ಹಾಜರಿದ್ದರು.
ಇದಕ್ಕೂ ಮುನ್ನ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ನಗರದ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಿಂದ ರಾಘವ ಕಲಾಮಂದಿರದ ವರೆಗೆ ಶೋಭಾಯಾತ್ರೆ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಗಾದಂ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿಗಳಾದ ಪಿ.ಗೋವಿಂದಯ್ಯ ಶೆಟ್ಟಿ, ವಿಟ್ಟಾ ಕೃಷ್ಣ ಕುಮಾರ್, ಟಿ.ಅಶ್ವತ್ ನಾರಾಯಣ, ಜಯಂತಿ ಕಿಶೋರ್ ಕುಮಾರ್, ನಾಮಾ ರಮೇಶ್, ಬೈರಾಪುರ ನಾರಾಯಣಶೆಟ್ಟಿ, ಸೋಂತ ಗಿರಿಧರ್ ಉಪಸ್ಥಿತರಿದ್ದರು.