ಶ್ರೀ ಕನ್ಯಕಾಪರಮೇಶ್ಯರೀ ಕೋ-ಆಪರೇಟಿವ್ ಬ್ಯಾಂಕಿಗೆ ಮತ್ತೊಂದು ಗರಿ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.24:- ಮುಂಬಯಿನ ದಿ ಲಲಿತ್ ಹೋಟೆಲಿನಲ್ಲಿ ನಡೆದ ಭಾರತ್ ಕೋ ಆಪರೇಟಿವ್ ಬ್ಯಾಂಕಿಗ್ ಸಮಿಟ್-2024 ಬ್ಯಾಂಕಿಗ್ ಸಮ್ಮೇಳನದಲ್ಲಿ ಮೈಸೂರಿನ ಪ್ರತಿಷ್ಠಿತ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಶ್ರೀಕನ್ಯಕಾಪರಮೇಶ್ವರೀ ಕೋ ಆಪರೇಟಿವ್ ಬ್ಯಾಂಕಿಗೆ *ಬೆಸ್ಟ್ ಡೇಟಾ ಸೆಂಟರ್ ಇಂಪ್ಲಿಮೆಂಟೇಶನ್ ವಿಭಾಗದಲ್ಲಿ ಭಾರತ್ ರತ್ನ ಸಹಕಾರಿತ ಸಮ್ಮಾನ್-2024 ಪ್ರಶಸ್ತಿಯನ್ನು ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಕಂಮ್ಯುನಿಕೇಷನ್ಸ್ ಅಂಡ್ ಐಟಿ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಜನರಲ್ (ಜಾಯಿಂಟ್ ಸೆಕ್ರೆಟರಿ ಲೆವೆಲ್) ಶ್ರೀ ಸುಮ್ನೆಸ್ ಜೋಶಿ ರವರು ನೀಡಿದರು. ನಮ್ಮ ಬ್ಯಾಂಕಿನ ಪರವಾಗಿ ನಿರ್ದೇಶಕರಾದ ಶ್ರೀ ಪುಟ್ಟು ಶ್ರೀನಿವಾಸ್ ರವರು, ಶ್ರೀ ಎಚ್. ವೆಂಕಟೇಶ್ ರವರು ವ್ಯವಸ್ಥಾಪನ ಮಂಡಳಿ ಸದಸ್ಯರಾದ ಶ್ರೀ ಆರ್. ಪಿ. ದೀಪಕ್ ರವರು ಪಡೆದುಕೊಂಡರು.
ಶ್ರೀ ಕನ್ಯಕಾಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಮೈಸೂರಿನಲ್ಲಿ ತನ್ನದೇ ಆದ ಡೇಟಾ ಸೆಂಟರನ್ನು ಅನುಷ್ಠಾನಗೊಳಿಸಿರುವ ಮೈಸೂರು ಜಿಲ್ಲೆಯ ಏಕೈಕ ಕೋ ಆಪರೇಟಿವ್ ಬ್ಯಾಂಕ್ ಆಗಿದ್ದು ಐಟಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿರುತ್ತದೆ. ಇದಲ್ಲದೆ ಈ ಬ್ಯಾಂಕ್ ತನ್ನದೇ ಆದ ಡೆಟಾ ಡಿಸಾಸ್ಟರ್ ರಿಕವರಿ ಸೆಂಟರ್ ಸಹ ಅನುಷ್ಠಾನಗೊಳಿಸಿರುತ್ತದೆ. ಈ ರೀತಿಯಾಗಿ ಗ್ರಾಹಕರಿಗೆ ಡಿಜಿಟಲ್ ಹಾಗೂ ವಿನೂತನ ಸೇವೆಗಳನ್ನು ಒದಗಿಸುತ್ತಾ ಬಂದಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರವರ್ತಕರಾಗಿರುತ್ತಾರೆ.