ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಜಯಂತಿ ಆಚರಣೆ

ಸಂಜೆವಾಣಿ ವಾರ್ತೆ

ಮಲೇಬೆನ್ನೂರು.ಮೇ.೧೯; ಸಮೀಪದ ಕೊಕ್ಕನೂರು ಗ್ರಾಮದಲ್ಲಿ ಆರ್ಯವೈಶ್ಯ ಸಮಾಜದವರು ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಸಮಾಜದ ನೂತನ ಕಾರ್ಯದರ್ಶಿ ಕೆ.ಎಲ್. ಹನುಮಂತಶ್ರೇಷ್ಠಿ ಅವರ ಮನೆಯಲ್ಲಿ ಆಚರಿಸಲಾಯಿತು.ಬೆಳಗ್ಗೆ ಗಂಗಾಪೂಜೆ ನೆರವೇರಿಸಿ ನಂತರ ಆರ್ಯವೈಶ್ಯ ಸಮಾಜದ ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಭಾವಚಿತ್ರ ಮತ್ತು ತುಂಬಿದ ಕಲಶವನ್ನು ಮೆರವಣಿಗೆ ಮೂಲಕ ತಂದು ಕೆ.ಎಲ್. ಹನುಮಂತಶ್ರೇಷ್ಠಿ ಅವರ ಮನೆಯಲ್ಲಿ ಗದ್ದಿಗೊಳಿಸಲಾಯಿತು.ಸಮಾಜದ ಎಲ್ಲಾ ಮಹಿಳೆಯರು ಅಮ್ಮನವರ ಭಜನೆಯನ್ನು ಮಾಡಿ ಧೂಪ, ದೀಪದೊಂದಿಗೆ ಆರತಿ ಮಾಡಿ ಎಲ್ಲರಿಗೂ ಪಾನಕ ಕೋಸಂಬರಿ ವಿತರಿಸಲಾಯಿತು.ವಾಸವಿ ಯುವಜನ ಸಂಘದ ನೂತನ ಅಧ್ಯಕ್ಷರನ್ನಾಗಿ ಕೆ.ವಿ. ಹುಚ್ಚುರಾಯ ಶ್ರೇಷ್ಠಿ, ಅವರಿಗೆ ನಿಕಟಪೂರ್ವ ಅಧ್ಯಕ್ಷ ಎಂ.ಕೆ. ರಾಮಶೆಟ್ಟಿ ಇವರು ದಾಖಲೆಗಳೊಂದಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಉಪಾಧ್ಯಕ್ಷರಾಗಿ ಎಸ್. ಅಂಬರೀಶ್, ಕಾರ್ಯದರ್ಶಿಯಾಗಿ ಕೆ.ಎಲ್. ಹನುಮಂತ ಶ್ರೇಷ್ಠಿ, ಸಹ ಕಾರ್ಯದರ್ಶಿಯಾಗಿ ಎಂ.ವಿ. ಪ್ರಹ್ಲಾದ ಶ್ರೇಷ್ಠಿ, ಖಜಾಂಚಿಯಾಗಿ ಕೆ.ಎಲ್. ಭಾಸ್ಕರ, ಸಹ ಖಜಾಂಚಿಯಾಗಿ ಕೆ.ಎಲ್. ರಮೇಶ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರು, ಮಹಿಳಾ ಸಮಾಜದವರು 5 ಕನ್ನಿಕೆಯರಿಗೆ ಪೂಜೆ ಸಲ್ಲಿಸಿ ಉಡಿ ತುಂಬಿದರು.